Publish Date: Tue, 06 Jun 2023 (14:51 IST)
Updated Date: Tue, 06 Jun 2023 (14:38 IST)
ವನ್ಯ ಜೀವಿಗಳ ಅಭಯಾರಣ್ಯ ಮೈಸೂರಿನ ನಾಗರಹೊಳೆ ಪ್ರವಾಸಿಗರ ಪ್ರೇಕ್ಷಣೀಯ ಸ್ಥಳವಾಗಿದೆ. ಸಫಾರಿಗೆ ತೆರಳಿದ್ದ ಪ್ರವಾಸಿಗರು ಬಲು ಅಪರೂಪದ ದೃಶ್ಯವನ್ನು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಸೀಳು ನಾಯಿಯನ್ನು ಬೇಟೆಯಾಡಲು ಹುಲಿ ಶರವೇಗದಲ್ಲಿ ಧಾವಿಸಿ ಬರುತ್ತಿದ್ಧಂತೆ ಸೀಳು ನಾಯಿ ಜೀವ ಭಯದಿಂದ ಓಡಿದೆ. ಅಷ್ಟರಲ್ಲಿ ಅಲ್ಲೇ ಇದ್ದ ಆನೆಯೊಂದು ಹುಲಿಯನ್ನು ಅಟ್ಟಾಡಿಸಿ ಹುಲಿಯಿಂದ ಸೀಳು ನಾಯಿಯನ್ನು ಬಚಾವ್ ಮಾಡಿದೆ. ಈ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ