ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ವಿದ್ಯುತ್ ದರ ಇಳಿಕೆ

Krishnaveni K
ಸೋಮವಾರ, 1 ಏಪ್ರಿಲ್ 2024 (12:48 IST)
ಬೆಂಗಳೂರು: ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿರುವಾಗ ಕರ್ನಾಟಕದಲ್ಲಿ ವಿದ್ಯುತ್  ದರ ಇಳಿಕೆಯಾಗಿದೆ. ಅದೂ ಬರೋಬ್ಬರಿ 15 ವರ್ಷದ ಬಳಿಕ.

ಗೃಹಬಳಕೆಯಲ್ಲಿ 100 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡುವವರಿಗೆ ಪ್ರತಿ ಯುನಿಟ್ ಗೆ 1.10 ರೂ. ಕಡಿಮೆ ಮಾಡಲಾಗಿದೆ. ಈ ಮೂಲಕ ರಾಜ್ಯದಲ್ಲಿ ಬರೋಬ್ಬರಿ 15 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ವಿದ್ಯುತ್ ದರ ಇಳಿಕೆಯಾದಂತಾಗಿದೆ.

2024-25 ನೇ ಸಾಲಿಗೆ ಅನ್ವಯವಾಗುವಂತೆ ಏಪ್ರಿಲ್ 1 ರಿಂದ ಈ ಹೊಸ ದರ ಅನ್ವಯವಾಗಲಿದೆ. ಮೊದಲು 100 ಯೂನಿಟ್ ಗಿಂತ ಹೆಚ್ಚು ಬಳಕೆ ಮಾಡುವವರಿಗೆ ಪ್ರತಿ ಯೂನಿಟ್ ಗೆ 7 ರೂ. ನಿಗದಿ ಮಾಡಲಾಗಿತ್ತು. ಇದೀಗ ಪ್ರತಿ ಯೂನಿಟ್ ಗೆ 5.90 ಯೂನಿಟ್ ದರ ನಿಗದಿಯಾಗಲಿದೆ.

ಸರ್ಕಾರ ಈಗ ಗೃಹಜ್ಯೋತಿ ನಿಯಮದಡಿ 200 ಯೂನಿಟ್ ಒಳಗೆ ವಿದ್ಯುತ್ ಬಳಸುವವರಿಗೆ ಉಚಿತ ವಿದ್ಯುತ್ ನೀಡುತ್ತಿದೆ. ಹೀಗಾಗಿ ಈ ಹೊಸ ದರ ಗೃಹಜ್ಯೋತಿ ಸೌಲಭ್ಯ ಹೊಂದಿದವರಿಗೆ ಅನ್ವಯಿಸುವುದಿಲ್ಲ. ಮುಂದಿನ ತಿಂಗಳಿನಿಂದ ಹೊಸ ಬಿಲ್ ಬರಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಜೆಪಿಯೇ ಗೂಂಡಾಗಳನ್ನು ಕಳುಹಿಸಿ ವಿದ್ಯಾರ್ಥಿಗಳ ಮೇಲೆ ಕಲ್ಲು ಬಿಸಾಕಿದ್ದಾರೆ: ಅಭಿಜಿತ್ ದೀಪ್ಕೆ ಆರೋಪ

ದೆಹಲಿಯಲ್ಲಿ ಹಿಂಸಾಚಾರ ತಾರಕಕ್ಕೆ: ಮೆಟ್ರೋ ನಿಲ್ದಾಣಗಳು ಸಂಪೂರ್ಣ ಬಂದ್

Karnataka Weather: ರಾಜ್ಯದ ಈ ಜಿಲ್ಲೆಯಲ್ಲಿ ಇಂದು ಹೈಅಲರ್ಟ್

ಧರ್ಮಸ್ಥಳದ ಸೌಜನ್ಯಾ ಪ್ರಕರಣ: ಸಿಬಿಐ ತನಿಖಾ ವೈಖರಿಗೆ ಸುಪ್ರೀಂ ಕೆಂಡಾಮಂಡಲ, ಮರು ತನಿಖೆಗೆ ತಾತ್ವಿಕ ಒಪ್ಪಿಗೆ

ಕಳೆದ ದಶಕದಲ್ಲಿ 152 ಬಾರಿ ಪ್ರಶ್ನೆಪತ್ರಿಕೆ ಸೋರಿಕೆ: ರಾಹುಲ್ ಗಾಂಧಿ

ಮುಂದಿನ ಸುದ್ದಿ
Show comments