Select Your Language

Notifications

webdunia
webdunia
webdunia
Thursday, 3 April 2025
webdunia

ಫೆ.11 ರಂದು ವಿದ್ಯುತ್ ಸೇವೆಗಳು ಹಾಗೂ ಸುರಕ್ಷತಾ ಅರಿವು ಕಾರ್ಯಕ್ರಮ

Electricity
bangalore , ಶುಕ್ರವಾರ, 11 ಫೆಬ್ರವರಿ 2022 (19:41 IST)
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ಮಡಿಕೇರಿ ಉಪವಿಭಾಗದಲ್ಲಿ ಅರಿವು ಸಪ್ತಾಹ ಕಾರ್ಯಕ್ರಮ ನಡೆಯಲಿದೆ. ಫೆಬ್ರವರಿ, 11 ರಂದು ಬೆಳಗ್ಗೆ 11 ಗಂಟೆಗೆ ನಾಪೋಕ್ಲು ಹಾಗೂ ಮೂರ್ನಾಡು ಶಾಖಾ ವ್ಯಾಪ್ತಿಯಲ್ಲಿ ಬರುವ ವಿದ್ಯುತ್ ಬಳಕೆದಾರರಿಗೆ ಮೂರ್ನಾಡು ಶಾಖೆ ಆವರಣದಲ್ಲಿ ಹಾಗೂ ಮಧ್ಯಾಹ್ನ 12 ಗಂಟೆಗೆ ಭಾಗಮಂಡಲ ಶಾಖಾ ವ್ಯಾಪ್ತಿಯಲ್ಲಿ ಬರುವ ವಿದ್ಯುತ್ ಬಳಕೆದಾರರಿಗೆ ಭಾಗಮಂಡಲ ಶಾಖೆ ಆವರಣದಲ್ಲಿ ಅರಿವು ಕಾರ್ಯಕ್ರಮ ನಡೆಯಲಿದೆ. 
       ವಿದ್ಯುತ್ ಅವಘಡ, ಅಪಘಾತಗಳನ್ನು ತಡೆಗಟ್ಟುವಿಕೆ, ವಿದ್ಯುತ್ ಸುರಕ್ಷತಾ ಕ್ರಮಗಳ ಬಗ್ಗೆ ನಿಗಮವು ಕೈಗೊಂಡಿರುವ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಹಾಗೂ ಗ್ರಾಹಕರಿಗೆ ತಿಳುವಳಿಕೆ ಮೂಡಿಸಲಾಗುವುದು ಎಂದು ಸೆಸ್ಕ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೈಕೋರ್ಟ್‌ ತ್ರಿ ಸದಸ್ಯ ಪೀಠʼದಿಂದ ಮಧ್ಯಂತರ ಆದೇಶ ಪ್ರಕಟ