Select Your Language

Notifications

webdunia
webdunia
webdunia
webdunia

ಎಂಇಎಸ್ ಸದಸ್ಯರಿಗೆ ಖಡಕ್ ಎಚ್ಚರಿಕೆ ನೀಡಿದ ಚುನಾವಣಾಧಿಕಾರಿ

ಎಂಇಎಸ್ ಸದಸ್ಯರಿಗೆ ಖಡಕ್ ಎಚ್ಚರಿಕೆ ನೀಡಿದ ಚುನಾವಣಾಧಿಕಾರಿ
ಬೆಳಗಾವಿ , ಮಂಗಳವಾರ, 24 ಮೇ 2016 (15:09 IST)
ಆಡಳಿತ ಭಾಷೆಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಸುತ್ತೇನೆ ಎಂದು ಚುನಾವಣಾಧಿಕಾರಿ ರಾಜಶ್ರೀ ಜೈನಾಪುರ, ಎಂಇಎಸ್ ಸದಸ್ಯರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
 
ನಗರದಲ್ಲಿ ನಡೆದ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿಗಳನ್ನು ಮರಾಠಿ ಭಾಷೆಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಸುವಂತೆ ಎಂಇಎಸ್ ಸದಸ್ಯರು ಒತ್ತಾಯಿಸಿದ್ದಾರೆ. ಆಡಳಿತ ಭಾಷೆಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಸುತ್ತೇನೆ, ಗದ್ದಲ ಮಾಡಿದರೆ ಸಭೆಯಿಂದ ಹೊರಕಟ್ಟುತ್ತೇನೆ ಎಂದು ಚುನಾವಣಾಧಿಕಾರಿ ರಾಜಶ್ರೀ ಜೈನಾಪುರ ಎಂಇಎಸ್ ಸದಸ್ಯರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
 
ಚುನಾವಣೆ ಪ್ರಕ್ರಿಯೆಯಲ್ಲಿ ಎಂಇಎಸ್ ಸದಸ್ಯರು ಗದ್ದಲ ಮಾಡುತ್ತಿದಂತೆ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ. ಪೊಲೀಸರನ್ನು ಕಂಡ ಸದಸ್ಯರ ಗಪ್ ಚುಪ್ ಬಾಯಿ ಮುಚ್ಚಿ ಸಭೆಯಲ್ಲಿ ಭಾಗವಹಿಸಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಉಡಾಫೆ ವರ್ತನೆ: ಕಾಂಗ್ರೆಸ್ ಶಾಸಕರಿಂದಲೇ ಸಚಿವ ಅಂಜನೇಯ್‌ಗೆ ತರಾಟೆ