Select Your Language

Notifications

webdunia
webdunia
webdunia
webdunia

ನಟಿ ಅಮೂಲ್ಯ ಮನೆ ಮೇಲೆ ಚುನಾವಣಾಧಿಕಾರಿಗಳ ದಾಳಿ

Amulya

Krishnaveni K

ಬೆಂಗಳೂರು , ಗುರುವಾರ, 25 ಏಪ್ರಿಲ್ 2024 (10:11 IST)
ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಅಮೂಲ್ಯ ಮಾವ, ಬಿಬಿಎಂಪಿ ಮಾಜಿ ಕಾರ್ಪೋರೇಟರ್ ರಾಮಚಂದ್ರ ಮನೆ ಮೇಲೆ ಚುನಾವಣಾಧಿಕಾರಿಗಳು ದಾಳಿ ನಡೆಸಿದ್ದಾರೆ.

ನಿನ್ನೆ ರಾತ್ರಿ 10 ಕಾರುಗಳಲ್ಲಿ ಬಂದ 30 ಕ್ಕೂ ಹೆಚ್ಚು ಚುನಾವಣಾಧಿಕಾರಿಗಳು ರಾಮಚಂದ್ರ ಮನೆಗೆ ಬಂದಿದ್ದು, ತಲಾಷ್ ನಡೆಸಿದ್ದಾರೆ. ಈ ವೇಳೆ ಸುಮಾರು 31 ಲೀಟರ್ ಮದ್ಯ ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಘಟನೆ ಬಳಿಕ ಅಮೂಲ್ಯ ಮಾವ ರಾಮಚಂದ್ರ ಮಾಧ‍್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಮೊಮ್ಮಕ್ಕಳ ಹುಟ್ಟುಹಬ್ಬಕ್ಕೆಂದು ಮದ್ಯ ತರಿಸಿಟ್ಟಿದ್ದೆವು. ಆದರೆ ಈಗ ಚುನಾವಣೆ ಸಮಯ ಆಗಿರುವುದರಿಂದ ಆಚರಣೆ ಬೇಡ ಎಂದು ನಿರ್ಧರಿಸಿದ್ದೆವು. ಈ ಏರಿಯಾದಲ್ಲಿ ಬಿಜೆಪಿಗೆ ಸಾಕಷ್ಟು ವೋಟ್ ಇದೆ. ಈ ಕಾರಣಕ್ಕೆ ಬೇಕೆಂದೇ ಚುನಾವಣಾಧಿಕಾರಿಗಳಿಗೆ ಹೇಳಿಸಿ ಈ ದಾಳಿ ನಡೆಸಿದ್ದಾರೆ.

ದಾಳಿ ವೇಳೆ ಆಗಾಗ ಅಧಿಕಾರಿಗಳಿಗೆ ಫೋನ್ ಬರುತ್ತಿತ್ತು. ಅಧಿಕಾರ ದುರ್ಬಳಕೆ ಮಾಡಿಕೊಂಡು ದಾಳಿ ನಡೆಸಿದ್ದಾರೆ. ಇದೆಲ್ಲಾ ಷಡ್ಯಂತ್ರ ಎಂದು ರಾಮಚಂದ್ರ ಆರೋಪ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತದಾನಕ್ಕಿನ್ನು ಒಂದು ದಿನ ಬಾಕಿ: ಇಂದಿನಿಂದಲೇ ಬಹಿರಂಗ ಪ್ರಚಾರ ಬಂದ್