Select Your Language

Notifications

webdunia
webdunia
webdunia
webdunia

ರೈತನ ಕುಟುಂಬಕ್ಕೆ ಹಣ ನೀಡಿಕೆ: ಯಡಿಯೂರಪ್ಪ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

ರೈತನ ಕುಟುಂಬಕ್ಕೆ ಹಣ ನೀಡಿಕೆ: ಯಡಿಯೂರಪ್ಪ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು
ಬೆಂಗಳೂರು , ಶನಿವಾರ, 8 ಏಪ್ರಿಲ್ 2017 (18:20 IST)
ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ನೀತಿ ಸಂಹಿತೆ ಉಲ್ಲಂಘಿಸಿ 1 ಲಕ್ಷ ರೂಪಾಯಿ ಪರಿಹಾರ ನೀಡಿದ ಆರೋಪದಡಿ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ವಿಧಾನಪರಿಷತ್ ಸದಸ್ಯ ಬೋಸರಾಜ್ ನೇತೃತ್ವದ ಕಾಂಗ್ರೆಸ್ ನಿಯೋಗ ಚುನಾವಣಾ ಆಯುಕ್ತ  ಅನಿಲ್ ಕುಮಾರ್ ಝಾಗೆ ದೂರು ನೀಡಿದೆ.

ಹೊಸಹಳ್ಳಿ ಗ್ರಾಮದಲ್ಲಿ ಆತ್ಮಹತ್ಯೆಗೀಡಾದ ರೈತನ ಕುಟುಂಬಕ್ಕೆ ಯಡಿಯೂರಪ್ಪ 1 ಲಕ್ಷ ರೂಪಾಯಿ ಹಣ ನೀಡಿರುವ ವಿಡಿಯೋ ವಾಟ್ಸಾಪ್`ನಲ್ಲಿ ಹರಿದಾಡುತ್ತಿದೆ. ಮಾಧ್ಯಮಗಳ ಕ್ಯಾಮೆರಾ ಆಫ್ ಮಾಡಿಸಿ ಹಣ ನೀಡಿದ್ದಾರೆಂಬ ಆರೋಪವೂ ಕೇಳಿಬಂದಿದೆ. ಪಕ್ಷದ ವತಿಯಿಂದ 1 ಲಕ್ಷ ರೂ. ನೀಡಿರುವುದಾಗಿ ಯಡಿಯೂರಪ್ಪನವರೇ ಹೇಳಿರುವ ದೃಶ್ಯಾವಳಿ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಇಲ್ಲಿಗೆ ಬಂದ ಮಂತ್ರಿ 10 ಲಕ್ಷ ರೂ. ಚೆಕ್ ತಂದು ರೈತನ ಕುಟುಂಬಕ್ಕೆ ಕೊಡಬೇಕಿತ್ತು ಎಂದು ಯಡಿಯೂರಪ್ಪ ಹೇಳಿರುವುದೂ ಸ್ಪಷ್ಟವಾಗಿದೆ.

ವಾಟ್ಸಾಪ್`ನಲ್ಲಿ ಹರಿದಾಡುತ್ತಿರುವ ವಿಡಿಯೋ ಜೊತೆ ಕಾಂಗ್ರೆಸ್ ನಾಯಕರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಆಯುಕ್ತರಿಗೆ ವಿಡಿಯೋ ತೋರಿಸಿ ದೂರು ಸಲ್ಲಿಸಿದ್ದಾರೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆ ಮೇಲೆ ಅತ್ಯಾಚಾರ ನಡೆಸಿ 2 ಲಕ್ಷ ಕೊಟ್ಟು ಸುಮ್ಮನಿರಿಸಿದ್ದ ಸರ್ಕಾರಿ ಅಧಿಕಾರಿ