Publish Date: Mon, 12 Jun 2023 (17:46 IST)
Updated Date: Mon, 12 Jun 2023 (19:23 IST)
ಜಯಮಹಾಲ್ ರಸ್ತೆ ಮಾರ್ಕೆಟ್ ,ಮೆಜೆಸ್ಟಿಕ್ ಹೀಗೆ ನಾನಾ ಭಾಗಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ .ಈ ಒಂದು ರಸ್ತೆಯನ್ನ ಫೈಪ್ ಲೈನ್ ಗಾಗಿ ಅಗೆಯಲಾಗಿದೆ.ಅಗೆದ ನಂತರ ಬೇಗ ರಸ್ತೆಯ ಕಾಮಗಾರಿ ಮಾಡಬೇಕು. ಆದ್ರೆ 3 ತಿಂಗಳಾಗಿದೆ ರಸ್ತೆ ಅಗೆದು ಇನ್ನು ಕಾಮಗಾರಿ ಮಾಡಿಲ್ಲ.ಹೀಗಾಗಿ ಬಸ್ ನಿಲ್ದಾಣದಲ್ಲಿ ನಿಲ್ಲಲಾಗದೇ ಜನರಂತೂ ಹೈರಾಣಾಗಿ ಹೋಗಿದ್ದಾರೆ.ಇನ್ನು ಈ ರಸ್ತೆಯಲ್ಲಿ ಸಂಚಾರಿಸುವ ಜನರು ಯಾವಾಗ ಕಾಮಗಾರಿ ಮುಗಿಯುತ್ತೋ ಅಂತಿದ್ದಾರೆ. ವಾಹನಸವಾರರು ಧೂಳಿನ ನಡುವೆ ವಾಹನ ಚಾಲಿಸುತ್ತಿದ್ರೆ, ಬಸ್ ನಿಲ್ದಾಣದಲ್ಲಿ ಇರಲಾಗದೇ ಜನರು ಪರದಾಟ ನಡೆಸುತ್ತಿದ್ದಾರೆ. ಜೊತೆಗೆ ಬೇಗ ಕಾಮಗಾರಿ ಮುಗಿಸಿ ಅಂತಾ ಆಕ್ರೋಶ ಹೊರಹಾಕ್ತಿದ್ದಾರೆ.ಒಟ್ನಲಿ ಜಯಮಹಾಲ್ ರಸ್ತೆಯ ಕಾಮಗಾರಿ ಕುಂಟುತ್ತಾ ಸಾಗ್ತಿದ್ದು ,ಬೇಗ ಕಾಮಗಾರಿ ಮುಗಿದ್ರೆ ಸಾಕು ಅಂತಾ ಜನರು ಆಗ್ರಹಿಸುತ್ತಿದ್ದಾರೆ.