ಡಿಕೆಶಿ ಬಳಿಕ ಕೆ ಜೆ ಜಾರ್ಜ್ ವಿರುದ್ಧ ಇಡಿಗೆ ದೂರು

ಶುಕ್ರವಾರ, 6 ಸೆಪ್ಟಂಬರ್ 2019 (17:05 IST)
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ರನ್ನು ಬಂಧಿಸಿರೋ ಇಡಿ ತನಿಖೆ ನಡೆಸುತ್ತಿರುವಂತೆ ಇದೀಗ ಮಾಜಿ ಸಚಿವ ಕೆಜೆ ಜಾರ್ಜ್ ವಿರುದ್ಧವೂ ಇಡಿಯಲ್ಲಿ ದೂರೊಂದು ದಾಖಲಾಗಿದೆ.

ಮುಖಂಡ ರವಿಕೃಷ್ಣರೆಡ್ಡಿ ದೂರು ಸಲ್ಲಿಸಿದ್ದು, ಅಕ್ರಮ ಆಸ್ತಿಯನ್ನು ಕೆ ಜೆ ಜಾರ್ಜ್ ಹೊಂದಿದ್ದಾರೆ. ಅಕ್ರಮ ಹಣ ವರ್ಗಾವಣೆ, ವಿದೇಶದಲ್ಲಿ ಆಸ್ತಿ ಗಳಿಕೆ ಹಾಗೂ ಮತ್ತಿತರ ವಿಷಯಗಳ ಮೇಲೆ ಕೇಸ್ ಹಾಕಿದ್ದಾರೆ.

ರಾಜ್ಯದ ಅನೇಕ ಮಂತ್ರಿಗಳು ತಮ್ಮ ಮಕ್ಕಳ, ಸಂಬಂಧಿಕರ ಹೆಸರಲ್ಲಿ ನೂರಾರು ಕೋಟಿ ರೂ. ಅಕ್ರಮ ಆಸ್ತಿ ಮಾಡಿದ್ದಾರೆ ಅಂತ ರವಿಕೃಷ್ಣಾರೆಡ್ಡಿ ದೂರಿದ್ದಾರೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ‘ಸಿಎಂ ಯಡಿಯೂರಪ್ಪ ಕಿರುಕುಳದಿಂದ ಡಿಸಿ ಸೆಂಥಿಲ್ ರಾಜೀನಾಮೆ’