Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಪಕ್ಷವನ್ನು ಕಸ ಗುಡಿಸುವಂತೆ ಗುಡಿಸಿ ಹಾಕ್ತೇವೆ: ಈಶ್ವರಪ್ಪ ಗುಡುಗು

ಕೆ.ಎಸ್. ಈಶ್ವರಪ್ಪ
ಬಾಗಲಕೋಟೆ , ಶುಕ್ರವಾರ, 6 ಅಕ್ಟೋಬರ್ 2017 (16:07 IST)
ಕಾಂಗ್ರೆಸ್ ಪಕ್ಷವನ್ನು ಕಸ ಗುಡಿಸುವಂತೆ ಗುಡಿಸಿ ಹಾಕ್ತೇನೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅಬ್ಬರಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಪಟ್ಟಣದಲ್ಲಿ ಆಯೋಜಿಸಲಾದ ನೇಕಾರರ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಕಳ್ಳರ ಪಕ್ಷ. ಇದೀಗ ಮನೆ ಮನೆಗೆ ಮತ ಕೇಳಲು ಬರುತ್ತಿದ್ದಾರೆ. ಹುಷಾರಾಗಿರಿ, ಬೇಗ ಮನೆಗೆ ಬೀಗ ಹಾಕಿಕೊಳ್ಳಿ ಎಂದು ಮತದಾರರಿಗೆ ಕರೆ ನೀಡಿದರು.
 
ಅಧಿಕಾರದ ಮದದಲ್ಲಿ ಕಲಿತಿದ್ದೇನೆಂದು ಮರೆತಿದ್ದಾರೆ. ದುಡ್ಡಿನ ಬಲದಿಂದ ಚುನಾವಣೆ ಗೆಲ್ಲುತ್ತೇವೆ ಎನ್ನುವ ಭ್ರಮೆಯಲ್ಲಿದ್ದಾರೆ. ಇಂತಹ ದರ್ಪದ ಮುಖ್ಯಮಂತ್ರಿಯನ್ನು ಮನೆಗೆ ಕಳುಹಿಸಿ ಎಂದು ಕಿಡಿಕಾರಿದರು.
 
ಸಿಎಂ ಸಿದ್ದರಾಮಯ್ಯಗೆ ಮಾನ ಮರ್ಯಾದೆ ಇದೇಯಾ? ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಉಮಾಶ್ರೀ ನೇಕಾರರ ಮಗಳು ಎಂದರು. ನೇಕಾರರ ಏಳಿಗೆಗಾಗಿ ಸಚಿವೆಯನ್ನಾಗಿ ಮಾಡಿದರು. ಆದರೆ, ಸಚಿವೆ ಉಮಾಶ್ರೀ ಮೇಯುವ ಅಡಳಿತ ಮುಂದುವರಿಸಿದ್ದಾರೆ ಎಂದು ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಜಿ.ಪರಮೇಶ್ವರ್‌ರನ್ನು ಸೋಲಿಸಿದ್ದೇ ಸಿಎಂ ಸಿದ್ದರಾಮಯ್ಯ: ಈಶ್ವರಪ್ಪ