Select Your Language

Notifications

webdunia
webdunia
webdunia
webdunia

ಮತ್ತೆ ಕಂಪಿಸಿದ ಭೂಮಿ: ಭಯದಲ್ಲಿ ಗ್ರಾಮಸ್ಥರು

ಭೂಮಿ ಕಂಪನ
ಮಲೆನಾಡಿನಲ್ಲಿ ಮತ್ತೆ ಮಳೆ ಆರಂಭಗೊಂಡಿರುವ ಬೆನ್ನಲ್ಲಿಯೇ ಅಲ್ಲಲ್ಲಿ ಭೂಮಿ ಕಂಪಿಸುತ್ತಿರುವ ಸದ್ದು ಜನರಿಗೆ ಕೇಳಿಬರುತ್ತಿದೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ಭೂಮಿ ಕಂಪಿಸಿರುವ ಘಟನೆ ನಡೆದಿದೆ. ಕೊಪ್ಪ ತಾಲೂಕಿನ ಕೊಗರೆ, ಅಬ್ಬಿಕಲ್ಲು ಹಾಗೂ ಸುತ್ತಲಿನ ಪ್ರದೇಶದಲ್ಲಿ ಗ್ರಾಮಸ್ಥರಿಗೆ ಭೂಮಿ ಕಂಪಿಸಿದ ಅನುಭವ ಆದ ಹಿನ್ನೆಲೆಯಲ್ಲಿ ಭಯ ಭೀತರಾಗಿದ್ದಾರೆ.

ಕಳೆದ ವಾರದಲ್ಲಿಯೂ ಸಹ ಭೂಮಿ ಕಂಪಿಸಿತ್ತು. ಈಗ ಮತ್ತೆ ಭಾರೀ ಸದ್ದಿನೊಂದಿಗೆ ಭೂಮಿ ಕಂಪಿಸಿರುವುದು ಗ್ರಾಮಸ್ಥರ ಅನುಭವಕ್ಕೆ ಬಂದಿದೆ. ನೆರೆ ಹಾವಳಿ ಹಾಗೂ ಮಳೆಯ ಸಂಕಷ್ಟದ ನಡುವೆ ಭೂಮಿ ಕಂಪಿಸುತ್ತಿರುವುದು ಸಹ ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಲು ಕಾರಣವಾಗುತ್ತಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಪ್ರಾಯೋಗಿಕ ವಿಮಾನ ಹಾರಾಟ ಸಿದ್ಧತೆ ಪರಿಶೀಲನೆ ಮಾಡಿದ ಸಚಿವ