Select Your Language

Notifications

webdunia
webdunia
webdunia
webdunia

ಸಿಎಂ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್`ಗೆ ಹದ್ದು ಡಿಕ್ಕಿ

ಸಿಎಂ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್`ಗೆ ಹದ್ದು ಡಿಕ್ಕಿ
ಬೆಂಗಳೂರು , ಸೋಮವಾರ, 24 ಏಪ್ರಿಲ್ 2017 (12:04 IST)
ಸಿಎಂ ಸಿದ್ದರಾಮಯ್ಯನವರಿಗೆ ಯಾಕೋ ಹಣೆಬರಹ ಸರಿ ಇದ್ದಂತೆ ಕಾಣುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್`ಗೆ ಹದ್ದು ಡಿಕ್ಕಿ ಹೊಡೆದ ಪ್ರಕರಣ ಎಚ್ಎಎಲ್ ಏರ್`ಪೋರ್ಟ್`ನಲ್ಲಿ ನಡೆದಿದೆ.

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಮೂಲಕ ಶ್ರವಣಬೆಳಗೊಳಕ್ಕೆ ತೆರಳಲು ಸಿದ್ಧರಾಗಿದ್ದರು. ಎಚ್`ಎಎಲ್ ಏರ್`ಪೋರ್ಟ್`ನಲ್ಲಿ ಕಾಪ್ಟರ್ ಟೇಕಾಫ್ ಆಗುತ್ತಿದ್ದಂತೆ ಹದ್ದು ಡಿಕ್ಕಿ ಹೊಡೆದಿದೆ. ಕೂಡಲೇ ಸಮಯ ಪ್ರಜ್ಞೆ ಮೆರೆದ ಪೈಲಟ್ ಹೆಲಿಕಾಪ್ಟರನ್ನ ಕೆಳಗಿಳಿಸಿದ್ದಾರೆ. ಇದರಿಂದ ಭಾರೀ ಅನಾಹುತ ತಪ್ಪಿದೆ.

ಘಟನೆ ನಡೆದಾಗ ಸಿಎಂ ಜೊತೆ ಗೃಹ ಸಚಿವ ಪರಮೆಶ್ವರ್ ಸಹ ಇದ್ದರು. ಗಟನೆಯಿಂದ ವಿಚಲಿತರಾದ ಸಿಎಂ ಮತ್ತು ಗೃಹ ಸಚಿವರು ಏರ್`ಪೋರ್ಟ್`ನಲ್ಲೇ ಉಳಿದು ಬಳಿಕ ಹಾಸನಕ್ಕೆ ತೆರಳಿದ್ದಾರೆ ಎಂದು ತಿಳಿದುಬಂದಿದೆ. ಈ ಹಿಂದೆ ಸಿಎಂ ಕಾರಿನ ಮೇಲೆ ಕಾಗೆ ಕುಳಿತು ಭಾರಿ ಸುದ್ದಿಯಾಗಿತ್ತು. ಬಳಿಕ ಸಿಎಂ ಕಾರನ್ನೇ ಬದಲಿಸಿದರು ಎಂದು ಹೇಳಲಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಜಯಲಲಿತಾ ಸೆಕ್ಯುರಿಟಿ ಗಾರ್ಡ್ ನಿಗೂಢ ಸಾವು