Select Your Language

Notifications

webdunia
webdunia
webdunia
webdunia

ದಸರಾ ಹಿನ್ನೆಲೆ ಬೆಂಗಳೂರು ಟು ಮಂಗಳೂರಿಗೆ ವಿಶೇಷ ರೈಲು ಓಡಾಟ, ಇಲ್ಲಿದೆ ಮಾಹಿತಿ

ಮಂಗಳೂರಿನಿಂದ ಬೆಂಗಳೂರಿಗೆ ವಿಶೇಷ ರೈಲು

Sampriya

ಮಂಗಳೂರು , ಶುಕ್ರವಾರ, 26 ಸೆಪ್ಟಂಬರ್ 2025 (15:10 IST)
Photo Credit X
ಮಂಗಳೂರು: ದಸರಾ ಹಿನ್ನೆಲೆ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಬೆಂಗಳೂರಿನಿಂದ ಹೊಸಪೇಟೆ ಮತ್ತು ಮಂಗಳೂರಿಗೆ ಒಂದು ವಿಶೇಷ ರೈಲನ್ನು ಓಡಿಸಲು ವ್ಯವಸ್ಥೆ ಮಾಡಲಾಗಿದೆ. 

ಸೆ.30ರಿಂದ ಯಶವಂತಪುರ ಮತ್ತು ಮಂಗಳೂರು ನಡುವೆ ವಿಶೇಷ ರೈಲು ಸಂಖ್ಯೆ 06257/ 06258 ಯಶವಂತಪುರದಿಂದ ರಾತ್ರಿ 11.55ಕ್ಕೆ ಹೊರಡಲಿದ್ದು, ಮರುದಿನ ಬೆಳಗ್ಗೆ 11.15ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. 

ಅ. 1ರಂದು 2.35ಕ್ಕೆ ಮಂಗಳೂರಿನಿಂದ ಹೊರಟು ರಾತ್ರಿ 11.30ಕ್ಕೆ ಯಶವಂತಪುರ ತಲುಪಲಿದೆ ಎಂದು ರೈಲ್ವೇ ಪ್ರಕಟನೆ ತಿಳಿಸಿದೆ.

ಸೆ.26ರಂದು ಮತ್ತು ಸೆ.28ರಂದು ಎಸ್‌ಎಂವಿಬಿಯಿಂದ ಸಂಜೆ 7 ಗಂಟೆಗೆ ಹೊರಡಲಿರುವ ರೈಲು ಮರುದಿನ ಬೆಳಗ್ಗೆ 4.15ಕ್ಕೆ ಹೊಸಪೇಟೆ ತಲುಪಲಿದೆ. ಹೊಸಪೇಟಿಯಿಂದ ಸೆ.27 ಮತ್ತು ಸೆ.29ರಂದು ರಾತ್ರಿ 8.45ಕ್ಕೆ ಹೊರಡಲಿರುವ ರೈಲು ಬೆಳಗ್ಗೆ 8.10ಕ್ಕೆ ಎಸ್‌ಎಂವಿಬಿ ತಲುಪಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಆಪರೇಷನ್ ಸಿಂಧೂರ್‌ವರೆಗೆ ಹೆಮ್ಮೆ ತಂದ ಮಿಗ್ -21ಗೆ ವಿಶೇಷ ಗೌರವ ಸಲ್ಲಿಸಿದ ರಾಜ್‌ನಾಥ್ ಸಿಂಗ್‌