Select Your Language

Notifications

webdunia
webdunia
webdunia
webdunia

ಡ್ರಿಂಕ್ ಅಂಡ್ ಡ್ರೈವ್ ಪರೀಕ್ಷೆ ವೇಳೆ ಪಿಎಸ್`ಐಗೆ ಕಪಾಳಮೋಕ್ಷ ಮಾಡಿದ ಯುವಕರು

drink and drive
ಬೆಂಗಳೂರು , ಭಾನುವಾರ, 9 ಏಪ್ರಿಲ್ 2017 (15:58 IST)
ಡ್ರಿಂಕ್ ಅಂಡ್ ಡ್ರೈವ್ ಪರೀಕ್ಷೆ ವೇಳೆ ಕಂಠಪೂರ್ತಿ ಕುಡಿದಿದ್ದ ಯುವಕರು ಪಿಎಸ್`ಐಗೆ ಕಪಾಳಮೋಕ್ಷ ನಡೆಸಿರುವ ಘಟನೆ ಓಲ್ಡ್ ಏರ್`ಪೋರ್ಟ್ ರಸ್ತೆಯ ಮಹದೇವಪುರದ ಟೋಟಲ್ ಮಾಲ್ ಬಳಿ ನಡೆದಿದೆ.

ಸಂಚಾರಿ ಠಾಣೆ ಪಿಎಸ್`ಐ ಮೊಹಮ್ಮದ್ ಡ್ರಿಂಕ್ ಅಂಡ್ ಪರೀಕ್ಷೆಗೆ ಮುಂದಾದಾಗ ಪ್ರಿಯೇಶ್ ಕುಮಾರ್ ಮತ್ತು ಅಲೋಕ್ ಕುಮಾರ್ ಎಂಬ ಯುವಕರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಕುಡಿದು ಎರ್ರಾಬಿರ್ರಿ ಬೈಕ್ ಓಡಿಸಿಕೊಂಡು ಬರುತ್ತಿದ್ದಾಗ ಅವರನ್ನ ತಡೆದ ಪಿಎಸ್`ಐ ವಿಚಾರಣೆಗೆ ಮುಂದಾದಾಗ ಏಕಾಏಕಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಕರ್ತವ್ಯ ನಿರತ ಪೊಲೀಸರ ಮೇಲೇ ಕುಡುಕರ ಪುಂಡಾಟ ಹೆಚ್ಚುತ್ತಿದ್ದು, ಇಂತಹವರ ವಿರುದ್ಧ ಕಾನೂನಿನಡಿ ಸೂಕ್ತ ಕ್ರಮ ಜರುಗಿಸಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು-ಮಂಗಳೂರು ಕುಡ್ಲ ಎಕ್ಸ್`ಪ್ರೆಸ್`ಗೆ ಚಾಲನೆ