ರಾಜ್ಯದಲ್ಲಿ ಸ್ಯಾಂಡಲ್ ವುಡ್ ಜೊತೆಗೆ ಕೆಲವು ರಾಜಕೀಯ ನಾಯಕರನ್ನು ಡ್ರಗ್ಸ್ ಮಾಫಿಯಾ ಸುತ್ತುಕೊಳ್ಳುತ್ತಿದೆ.
ಡ್ರಗ್ಸ್ ಕೇಸ್ ನಲ್ಲಿ ಯಾರೇ ಇರಲಿ, ಎಷ್ಟೇ ಪ್ರಭಾವಿ ಶಾಲಿಯಾಗಿದ್ದರೂ ರಾಜ್ಯ ಸರಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿದೆ.
ಡ್ರಗ್ಸ್ ಮಾಫಿಯಾ ವಿಚಾರದಲ್ಲಿ ಸಿನಿಮಾ, ರಾಜಕೀಯದವರನ್ನೂ ಬಿಡೋದಿಲ್ಲ ಎಂದು ಆರೋಗ್ಯ ಇಲಾಖೆ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ರಾಜಕೀಯ ಹಾಗೂ ಸಿನಿಮಾ ಅಲ್ಲದೇ ಹಲವು ರಂಗಗಳಲ್ಲಿಯೂ ಡ್ರಗ್ಸ್ ದಂಧೆ ಇದೆ. ಯುವಜನತೆ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ ಎಂದು ಸಚಿವರು ಹೇಳಿದ್ದಾರೆ.