Select Your Language

Notifications

webdunia
webdunia
webdunia
webdunia

ಗೂಗಲ್ ಮ್ಯಾಪ್ ನಂಬಿ ಕಾರು ಚಾಲನೆ: ನೀರುಪಾಲಾದ ಕಾರು, ಇಬ್ಬರ ರಕ್ಷಣೆ

ಗೂಗಲ್ ಮ್ಯಾಪ್ ನಂಬಿ ಕಾರು ಚಾಲನೆ: ನೀರುಪಾಲಾದ ಕಾರು, ಇಬ್ಬರ ರಕ್ಷಣೆ

Sampriya

ಬದಿಯಡ್ಕ , ಗುರುವಾರ, 27 ಜೂನ್ 2024 (19:48 IST)
Photo Courtesy X
ಬದಿಯಡ್ಕ: ಗೂಗಲ್ ಮ್ಯಾಪ್ ಆಧರಿಸಿ ಕಾರು ಚಲಾಯಿಸುತ್ತಿದ್ದಾಗ ತೋಡಿನ ಕಡೆ ಮ್ಯಾಪ್ ತೋರಿಸಿದ್ದರಿಂದ ಕಾರು ಸಂಪೂರ್ಣವಾಗಿ ಮುಳುಗಿದ ಘಟನೆ ಕರ್ನಾಟಕದ ಉಪ್ಪಿನಂಗಡಿಗೆ ತೆರಳುತ್ತಿದ್ದಾಗ ಇಲ್ಲಿನ ಪಳ್ಳಂಜಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಕುತ್ತಿಕೋಲಿನಿಂದ ಅರಣ್ಯದ ಮೂಲಕ ಪಾಂಡಿಗೆ ತೆರಳುವಾಗ ಪಳ್ಳಂಜಿ ತೋಡಿನ ಹಳೆಯ ಸೇತುವೆಯಲ್ಲಿ ಅವಘಡ ನಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಅಂಜಿಲ್ಲತ್ ಹೌಸ್‌ನ ತಸ್ರೀಫ್ (36), ಪುಲ್ಲೂರ್ ಮುನಂಬಂ ಹೌಸ್‌ನ ಅಬ್ದುಲ್ ರಶೀದ್ (35) ಪಾರಾಗಿದ್ದಾರೆ.

ಗೂಗಲ್‌ ಮ್ಯಾಪ್‌ ಆಧರಿಸಿ ಕಾರು ಚಲಾಯಿಸುತ್ತಿದ್ದಾಗ ಘಟನೆ ನಡೆದಿದೆ ಎಂದು ಚಾಲಕ ತಿಳಿಸಿದ್ದಾರೆ. ಎರಡೂ ಬದಿಯಲ್ಲಿ ಯಾವುದೇ ಆಧಾರ ಇಲ್ಲದ ತೋಡಿನ ಸೇತುವೆ ದಾಟುವಾಗ ಕಾರು ಉರುಳಿದೆ. ಈ ವೇಳೆ ತೋಡು ತುಂಬಿ ಹರಿಯುತ್ತಿತ್ತು.

ಕಾರು ಸಂಪೂರ್ಣವಾಗಿ ಮುಳುಗಿದ್ದರೂ ಕಾರಿನಿಂದ ಹೊರಬಂದ ತಸ್ರೀಫ್‌, ರಶೀದ್‌ ಅವರು ಮರವನ್ನು ಹಿಡಿದು ಕುಳಿತು ಪೊಲೀಸರಿಗೆ ಕರೆ ಮಾಡಿ ಅಪಾಯದಿಂದ ಪಾರಾಗಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಪ್ರವಾಸಿಗರಿಗೆ ಗುಡ್‌ನ್ಯೂಸ್‌, ಬನ್ನೇರುಘಟ್ಟದಲ್ಲಿ ಚಿರತೆ ಸಫಾರಿಗೆ ಚಾಲನೆ