Select Your Language

Notifications

webdunia
webdunia
webdunia
webdunia

ವಿಧಾನಸಭೆಯಲ್ಲಿ ಡ್ರೆಸ್ ಕೋಡ್ ವಿಚಾರ ಪ್ರಸ್ತಾಪ

ವಿಧಾನಸಭೆಯಲ್ಲಿ ಡ್ರೆಸ್ ಕೋಡ್ ವಿಚಾರ ಪ್ರಸ್ತಾಪ
ಬೆಂಗಳೂರು , ಗುರುವಾರ, 17 ಫೆಬ್ರವರಿ 2022 (07:11 IST)
ಬೆಂಗಳೂರು : ವಿಧಾನಸಭೆಯಲ್ಲಿ ಪದವಿ ಕಾಲೇಜುಗಳಲ್ಲಿ ಡ್ರೆಸ್ ಕೋಡ್ ವಿಚಾರವನ್ನು ಸಿದ್ದರಾಮಯ್ಯ ಪ್ರಸ್ತಾಪಿಸಿದ್ರು.

ಚಾಮರಾಜನಗರದಲ್ಲಿ ನಿನ್ನೆ ಅಶ್ವಥ್ ನಾರಾಯಣ್ ಡಿಗ್ರಿ ಕಾಲೇಜ್ಗಳಲ್ಲಿ ಸಮವಸ್ತ್ರ ಕಡ್ಡಾಯ ಅಲ್ಲ ಅಂತ ಹೇಳಿದ್ದಾರೆ. ಈ ಬಗ್ಗೆ ಸಿಎಂ ಸ್ಪಷ್ಟನೆ ಕೊಡ್ಬೇಕು. ಅದಕ್ಕೆ ಬದ್ಧರಾಗಿರಬೇಕು ಅಂದ್ರು.

ಸಿಎಂ ಬೊಮ್ಮಾಯಿ ಉತ್ತರಿಸಿ, ಎಲ್ಲಿ ಡ್ರೆಸ್ ಕೋಡ್ ಇದೆ. ಅಲ್ಲಿ ನಿಯಮ ಫಾಲೋ ಮಾಡಿ ಅಂತ ಹೈಕೋರ್ಟ್ ಆದೇಶವೂ ಸ್ಪಷ್ಟವಾಗಿದೆ. ಉನ್ನತ ಶಿಕ್ಷಣ ಸಚಿವರು ಕ್ಲಿಯರ್ ಆಗಿ ಹೇಳಿದ್ದಾರೆ. ಅದಕ್ಕೆ ಮತ್ತೆ ಸ್ಪಷ್ಟೀಕರಣ ಅಗತ್ಯ ಇಲ್ಲ ಅಂದ್ರು. ಸಚಿವರು ಹೇಳಿದ್ದು ಸರಿ, ನೀವು ಸ್ಪಷ್ಟನೆ ಕೊಡಿ ಅಂತ ಸಿದ್ದರಾಮಯ್ಯ ಕೇಳಿದ್ರು. ಸಚಿವರೇ ಹೇಳಿದ್ಮೇಲೆ ನನ್ನ ಸ್ಪಷ್ಟನೆ ಅನಗತ್ಯ ಅಂತ ಸಿಎಂ ಉತ್ತರಿಸಿದ್ರು.

ಇತ್ತ ಸದನದಲ್ಲಿ ಕಾಂಗ್ರೆಸ್ ಸದಸ್ಯರು ನಡೆದುಕೊಂಡ ರೀತಿ ಸರಿಯಲ್ಲ ಅಂತ ಸಿಎಂ ಬೊಮ್ಮಾಯಿ ಕಿಡಿಕಾರಿದ್ದಾರೆ. ರಾಷ್ಟ್ರಧ್ವಜವನ್ನು ರಾಜಕೀಯ ತೆವಲಿಗೆ ದುರ್ಬಳಕೆ ಮಾಡಿಕೊಳ್ತಿದ್ದಾರೆ.

ಕಾನೂನಾತ್ಮಕವಾಗಿ ಈಶ್ವರಪ್ಪನವರು ಮಾತನಾಡಿರುವುದರಲ್ಲಿ ತಪ್ಪಿಲ್ಲ ಅಂದ್ರು. ಈಶ್ವರಪ್ಪ ಮಾತಾಡಿ, ನಾನು ಭಗವಾಧ್ವಜ ಹಾರಿಸಿದ್ದೇನೆ ಅಂತ ಹೇಳಿದ್ದರೆ ಈಗಲೇ ರಾಜೀನಾಮೆ ಕೊಡುತ್ತೇನೆ ಅಂದ್ರು.


Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಆನ್‌ಲೈನ್ ಗೇಮಿಂಗ್‌ಗೆ ಗ್ರೀನ್ ಸಿಗ್ನಲ್ ನೀಡಿದ ಹೈ ಕೋರ್ಟ್