Select Your Language

Notifications

webdunia
webdunia
webdunia
webdunia

ಧರ್ಮಸ್ಥಳ ಪ್ರಕರಣದಲ್ಲಿ ತೀವ್ರ ಬೆಳವಣಿಗೆ: ನೇತ್ರಾವತಿ ನದಿ ತಟದಲ್ಲಿ ಎಸ್‌ಐಟಿಯಿಂದ ಸ್ಥಳ ಮಹಜರು

ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ

Sampriya

ಮಂಗಳೂರು , ಸೋಮವಾರ, 28 ಜುಲೈ 2025 (14:15 IST)
Photo Credit X
ಮಂಗಳೂರು : ಧರ್ಮಸ್ಥಳದಲ್ಲಿ ನೂರಾರು ಶವಗಳ ಹೂತಿಟ್ಟ ಪ್ರಕರಣ ಸಂಬಂಧ ಇದೀಗ ತೀವ್ರ ಬೆಳವಣಿಗೆ ಕಂಡುಬಂದಿದೆ. ಕಳೆದ 2 ದಿನದಿಂದ ಎಸ್‌ಐಟಿ ತಂಡ ದೂರದಾರನ ವಿಚಾರಣೆ ನಡೆಸುತ್ತಿದ್ದು, ಇದೀಗ ನೇತ್ರಾವತಿ ನದಿಯ ತಟದಲ್ಲಿ ಸ್ಥಳ ಮಹಜರು ಶುರು ಮಾಡಿದ್ದಾರೆ. 

ಎಸ್‌ಐಟಿ ವಿಚಾರಣೆ ವೇಳೆ ದೂರುದಾರ ತಲೆ ಬುರುಡೆಯನ್ನು ನೇತ್ರಾವತಿ ಸ್ನಾನಘಟ್ಟದ ಬಳಿಯಿಂದ ಹೊರತೆಗೆದಿರುವುದಾಗಿ ತಿಳಿಸಿದ್ದ. 

ಈ ಹಿನ್ನೆಲೆ ತಂಡವು ಫೊರೆನ್ಸಿಕ್ ಇಲಾಖೆಯ ಹಿರಿಯ ಅಧಿಕಾರಿಗಳು, ಕಂದಾಯ ಇಲಾಖೆ, ಅರಣ್ಯ ಇಲಾಖೆ ಮತ್ತು ಸರ್ವೇ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಸ್ಥಳ ಮಹಜರು ಆರಂಭಿಸಿದೆ.

ಪೊಲೀಸ್ ಬಿಗಿ ಭದ್ರತೆಯಲ್ಲಿ ಎಸ್‌ಐಟಿ ಎಸ್ಪಿ ಸಿ.ಎ.ಸೈಮನ್ ಅವರ ನೇತೃತ್ವದಲ್ಲಿ ದೂರುದಾರನನ್ನು ಸ್ಥಳಕ್ಕೆ ಕರೆತಂದು ಸ್ಥಳ ಮಹಜರು ಮಾಡಲಾಗಿದೆ. 

ಪೊಲೀಸ್ ಬಿಗಿ ಭದ್ರತೆಯಲ್ಲಿ ಸ್ಥಳ ಮಹಜರು ಕಾರ್ಯ ಆರಂಭವಾಗಿದೆ. ಎಸ್‌ಐಟಿ ಅಧಿಕಾರಿ ಜಿತೇಂದ್ರ ಕುಮಾರ್ ದಯಾಮ ಮತ್ತು ಎಸ್ಪಿ ಸಿ.ಎ.ಸೈಮನ್, ಅರಣ್ಯ ಇಲಾಖೆಯ ರೇಂಜರ್ ತ್ಯಾಗರಾಜ್ ಸೇರಿ ಇನ್ನಿತರರ ಸಮ್ಮುಖದಲ್ಲಿ ಸ್ಥಳ ಮಹಜರು ನಡೆಯುತ್ತಿದೆ.

ಸ್ಥಳ ಮಹಜರು ಬಳಿಕ ದೂರುದಾರನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆಯಿದ್ದು, ನಂತರ ಆತ ಹೂತ್ತಿದ್ದೇನೆ ಎನ್ನಲಾಗುತ್ತಿರುವ ಪ್ರದೇಶಗಳ ಪರಿಶೀಲನೆ ಮಾಡುವ ಸಾಧ್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸರಕಾರ ನಡೆಸಲು ಬಾರದ ಕಾಂಗ್ರೆಸ್ಸಿಗರು: ಗೋವಿಂದ ಕಾರಜೋಳ