ವರದಕ್ಷಿಣೆ ತರಲಿಲ್ಲವೆಂದು ಆಕ್ರೋಶಗೊಂಡ ಪತಿಮಹಾಶಯನೊಬ್ಬ ಪತ್ನಿಯ ಮುಖವನ್ನು ಮನಬಂದಂತೆ ಕಚ್ಚಿ ಗಾಯಗೊಳಿಸಿದ ಘಟನೆ ವರದಿಯಾಗಿದೆ.
ಪತಿ ಲೋಕೇಶ್ ವಿಕೃತ ಮನೋಭಾವದಿಂದ ನೊಂದ ಪತ್ನಿ ವರಲಕ್ಷ್ಮಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ಯಾವುದೇ ಪ್ರಯೋಜನಾಗಿಲ್ಲ ಎಂದು ವರಲಕ್ಷ್ಮಿ ದೂರು ನೀಡಿದ್ದಾರೆ.
ಪತಿಯ ಕಿರುಕುಳದಿಂದ ಬೇಸತ್ತು ತವರುಮನೆಗೆ ಬಂದಿರುವ ವರಲಕ್ಷ್ಮಿ, ತನ್ನ ಪತಿ ಲೋಕೇಶ್ ತಪ್ಪು ತಿದ್ದಿಕೊಂಡು ಬಂದಲ್ಲಿ ಆತನೊಂದಿಗೆ ಜೀವನ ನಡೆಸುವುದಾಗಿ ತಿಳಿಸಿದ್ದಾಳೆ.
ಪತಿ ಲೋಕೇಶ್‌ನನ್ನು ಕರೆಸಿ ಬುದ್ದಿವಾದ ಹೇಳುವಂತೆ ಪೊಲೀಸರಿಗೆ ದೂರು ನೀಡಿದ್ದರು ಪೊಲೀಸರು ಯಾವುದೇ ನೆರವು ನೀಡಲಿಲ್ಲ ಎನ್ನಲಾಗಿದೆ. ಕೊನೆಗೆ ಮಹಿಳಾ ಸೈನ್ಯ ಸಂಘಟನೆಗೆ ಮನವಿ ಮಾಡಿದರೂ ಯಾವುದೇ ನೆರವಾಗದ ಹಿನ್ನೆಲೆಯಲ್ಲಿ ಬೇಸತ್ತ ವರಲಕ್ಷ್ಮಿ ಮಾಧ್ಯಮಗಳ ನೆರವು ಕೋರಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.