ನಾಳೆಯಿಂದ ಮನೆಮನೆ ಬಾಗಿಲಿಗೆ ಸಮೀಕ್ಷೆ: ನಿಮ್ಮ ಬಳಿ ಯಾವ್ಯಾವ ದಾಖಲೆಗಳು ಇರಬೇಕು ಗೊತ್ತಾ

Sampriya
ಭಾನುವಾರ, 21 ಸೆಪ್ಟಂಬರ್ 2025 (11:46 IST)
ಬೆಂಗಳೂರು: ನಾಳೆಯಿಂದ ಮನೆಮನೆ ಬಾಗಿಲಿಗೆ ಸಮೀಕ್ಷೆ ಸಿಬ್ಬಂದಿ ಬರಲಿದ್ದಾರೆ. ರಾಜ್ಯ ಸರ್ಕಾರ ಇಡೀ ರಾಜ್ಯದಲ್ಲಿ ಹೊಸದೊಂದು ಸಮೀಕ್ಷೆಗೆ ಚಾಲನೆ ನೀಡಲಿದೆ. ಹಿಂದುಳಿದ ಆಯೋಗದ ಮೂಲಕ ಶೈಕ್ಷಣಿಕ ಆರ್ಥಿಕ ಸಮೀಕ್ಷೆ ನಡೆಸಲಾಗುತ್ತದೆ.

ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ನಾಳೆಯಿಂದಲೇ ಅಧಿಕೃತವಾಗಿ ಹಿಂದುಳಿದ ಆಯೋಗ ನಡೆಸಲಿದೆ. ಈ ಬಗ್ಗೆ ಹಿಂದುಳಿದ ಆಯೋಗ ಕೂಡ ಈಗಾಗಲೇ ಎಲ್ಲಾ ತಯಾರಿ ಮಾಡಿಕೊಂಡಿದೆ.

ಸಮೀಕ್ಷಾ ಕಾರ್ಯಕ್ಕಾಗಿ ಶಿಕ್ಷಕರು, ಕಂದಾಯ ಇಲಾಖೆಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಸಮೀಕ್ಷೆಯನ್ನ ಸಂಪೂರ್ಣ ಡಿಜಿಟಲ್ ಮಾದರಿಯಲ್ಲಿ ಯಾವ ರೀತಿಯಲ್ಲಿ ಮಾಡಬೇಕು ಎಂಬುದನ್ನು ತರಬೇತಿ ನೀಡಲಾಗಿದೆ.

ಇನ್ನೂ ಸಾರ್ವಜನಿಕರು ಕೂಡ ಸಮೀಕ್ಷೆ ವೇಳೆಯಲ್ಲಿ ಕೆಲ ದಾಖಲೆಗಳನ್ನ ಸಿದ್ಧ ಮಾಡಿಟ್ಟುಕೊಂಡರೇ ಸಮೀಕ್ಷೆಯ ವೇಳೆಯಲ್ಲಿ ಯಾವುದೇ ಗೊಂದಲವಾಗಲಿ, ಸಮಸ್ಯೆಗಳಾಲಿ ಆಗೋದಿಲ್ಲ. ಜನರು  ಆಧಾರ್ ಕಾರ್ಡ್, ರೇಷನ್‌ಕಾರ್ಡ್, ‌ಮತದಾನದ ಗುರುತಿನ ಚೀಟಿ, ವಿದ್ಯಾಭ್ಯಾಸದ ಅಂಕ ಪಟ್ಟಿ ಹೊಂದಿರಬೇಕು. 

ಕುಟುಂಬದ ಎಲ್ಲ ಸದಸ್ಯರು ಈ ದಾಖಲೆಗಳನ್ನು ರೆಡಿ ಮಾಡಿಟ್ಟುಕೊಂಡು ಸಮೀಕ್ಷೆಗೆ ಅಧಿಕಾರಿಗಳು ಬಂದಾಗ ಗುರುತಿನ ಚೀಟಿಯ ನಂಬರ್‌ಗಳನ್ನು ಹೇಳಿದರೆ ಸಾಕು, ಇದರ ಜೊತೆಗೆ ನೀವು ನೀಡಬೇಕಾದ ಮಾಹಿತಿಗಳ ಬಗ್ಗೆಯೂ ಸಹ ಗಮನವಿರಲಿ. 

ಮುಖ್ಯವಾಗಿ ಧರ್ಮ, ಜಾತಿ, ಉಪಜಾತಿ, ಜಾತಿಗೆ ಇರೋ ಸಮನಾರ್ಥಕ ಹೆಸರಿದ್ದಲ್ಲಿ ಅದು, ಕುಟುಂಬದ ಎಲ್ಲ ಸದಸ್ಯರ ಶೈಕ್ಷಣಿಕ ಮಟ್ಟ, ಕುಟುಂಬದವರ ಆಸ್ತಿಯ ವಿವರಗಳು, ಆಧಾರ್ ಕಾರ್ಡ್ ನೊಂದಾಯಿತ ನಂಬರ್‌ಗೆ ಕೆವೈಸಿ ಕೂಡ ಬರಲಿದೆ.

ಒಟ್ಟಿನಲ್ಲಿ ಅನೇಕ ಗೊಂದಲಗಳ ನಡುವೆಯೂ ನಾಳೆಯಿಂದ ಸಮೀಕ್ಷೆ ಶುರುವಾಗಲಿದೆ. ಅಕ್ಟೋಬರ್ 7ರವರೆಗೆ ಸಮೀಕ್ಷೆ ನಡೆಯಲಿದೆ.  <>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹೈಕಮಾಂಡ್‌ನಲ್ಲಿ ಕೆಲ ಶಾಸಕರ ಶಕ್ತಿಪ್ರದರ್ಶನ, ಕೊನೆಗೂ ಮೌನ ಮುರಿದ ಡಿಕೆ ಶಿವಕುಮಾರ್

ಶಕ್ತಿ ಪ್ರದರ್ಶನಕ್ಕೆ ಜೈಲಿಗೂ ಕಾಲಿಟ್ರಾ ಡಿಕೆ ಶಿವಕುಮಾರ್, ಭಾರೀ ಬೆಳವಣಿಗೆ

ಕಾಂಗ್ರೆಸ್ ಸರಕಾರ ಹೋಳು; ಜನರ ಪಾಲಿಗೆ ಗೋಳು, ರೈತರಿಗೆ ಹೂಳು: ಆರ್.ಅಶೋಕ್ ಟೀಕೆ

ಸಹೋದ್ಯೋಗಿಯೊಂದಿಗಿನ ಆಫೇರ್‌ನಿಂದ 150 ಕೋಟಿ ಸಂಬಳದ ಕೆಲಸ ಕಳೆದುಕೊಂಡ ವ್ಯಕ್ತಿ

ಡಿಕೆಶಿ ಶಕ್ತಿಪ್ರದರ್ಶನದ ಬೆನ್ನಲ್ಲೇ ನನ್ನದು ಕಾಂಗ್ರೆಸ್ ಬಣ ಎಂದ ರಾಮಲಿಂಗಾ ರೆಡ್ಡಿ

ಮುಂದಿನ ಸುದ್ದಿ
Show comments