Select Your Language

Notifications

webdunia
webdunia
webdunia
webdunia

ರಮ್ಯಾ ಹೇಳಿಕೆಗೆ ಅನರ್ಥ ಕಲ್ಪಿಸುವುದು ಬೇಡ: ಜಿ.ಪರಮೇಶ್ವರ್

ರಮ್ಯಾ ಹೇಳಿಕೆಗೆ ಅನರ್ಥ ಕಲ್ಪಿಸುವುದು ಬೇಡ: ಜಿ.ಪರಮೇಶ್ವರ್
ಉಡುಪಿ , ಶುಕ್ರವಾರ, 26 ಆಗಸ್ಟ್ 2016 (15:43 IST)
ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಪಾಕಿಸ್ತಾನ ಪರ ಹೇಳಿಕೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ರಮ್ಯಾ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅವರ ಹೇಳಿಕೆಗೆ ವಿವಿಧ ಅರ್ಥ ಕಲ್ಪಿಸುವುದು ಬೇಡವೆಂದು ರಾಜ್ಯ ಗೃಹ ಖಾತೆ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
 
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ನಟಿ ರಮ್ಯಾ ಅವರ ಮೇಲೆ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದ ಘಟನೆ ನಡೆಯಬಾರದಿತ್ತು. ನಟಿ ರಮ್ಯಾ ಪಾಕ್ ಪರ ಹೇಳಿಕೆ ನೀಡಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸುವ ಸಮಯದಲ್ಲಿ ಪಾಕಿಸ್ತಾನದ ಪ್ರಧಾನಿಯನ್ನು ಆಹ್ವಾನಿಸಿರಲಿಲ್ಲವೇ ಎಂದು ಪ್ರಶ್ನಿಸಿದರು.
 
ರಮ್ಯಾ ಮಂಗಳೂರು ನಗರವನ್ನು ನರಕಕ್ಕೆ ಹೊಲಿಸಿರುವುದರ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ಮಂಗಳೂರು ಒಂದು ಪ್ರಮುಖ ನಗರವಾಗಿದ್ದು, ಬೆಂಗಳೂರಿಗೆ ಪರ್ಯಾಯವಾಗಿ ಬೆಳೆಯಬೇಕಿದೆ ಎಂದು ಹೇಳಿದರು.
 
ಅತ್ತಿಬೆಲೆ ಪಿಎಸ್‌ಐಗೆ ಡಿ.ಕೆ.ಸುರೇಶ್ ಧಮ್ಕಿ ಪ್ರಕರಣ.....
 
ಅತ್ತಿಬೆಲೆ ಪಿಎಸ್‌ಐ ಅವರ ಮೇಲೆ ಸಂಸದ ಡಿ.ಕೆ.ಸುರೇಶ್ ಧಮ್ಕಿ ಹಾಕಿರುವ ಕುರಿತು ನನಗೆ ಮಾಹಿತಿ ಇಲ್ಲ. ಮಾಹಿತಿ ಪಡೆದುಕೊಂಡು ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.

 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಎಬಿವಿಪಿ, ಬಿಜೆಪಿ ಪೊಳ್ಳು ದೇಶಭಕ್ತರು: ವಿ.ಎಸ್.ಉಗ್ರಪ್ಪ