ಚಿತ್ರದುರ್ಗ : ಸುಳ್ಳು ಬಿಜೆಪಿಯ ಮನೆದೇವರು. ಅವರನ್ನು ಯಾರೂ ನಂಬಬೇಡಿ ಎಂದು ಜನರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ಚಿತ್ರದುರ್ಗದಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯೋಜಿಸಿದ್ದ ಎಸ್ಸಿ ಹಾಗೂ ಎಸ್ಟಿ ಐಕ್ಯತಾ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಮುಖಂಡರು ಜನರ ಭಾವನೆಗಳ ಮೇಲೆ ದೇಶ ಕಟ್ಟಲು ಮುಂದಾಗಿದ್ದಾರೆ.
ಆದರೆ ಕಾಂಗ್ರೆಸ್ ಜನರ ಬದುಕಿನ ಮೇಲೆ ದೇಶ ಕಟ್ಟಲಿದೆ. ಹೀಗಾಗಿ ರಾಜ್ಯದ ಜನರು ಯಾರು ಸಹ ಬಿಜೆಪಿಯ ಸುಳ್ಳಿನ ಕಂತೆಗೆ ಬಲಿಯಾಗಬೇಡಿ. ಬಿಜೆಪಿಗೆ ಸುಳ್ಳೇ ಬಂಡವಾಳ ಆಗಿದೆ. ಬಿಜೆಪಿ ನುಡಿದಂತೆ ನಡೆಯಲು ಆಗಿಲ್ಲ. ಚುನಾವಣೆಯ ವೇಳೆ ಕೊಟ್ಟ ಮಾತು ಈಡೇರಿಸಲಿಲ್ಲ ಎಂದು ವಾಗ್ದಾಳಿ ನಡೆಸಿದರು.