Publish Date: Tue, 12 Sep 2017 (08:49 IST)
Updated Date: Tue, 12 Sep 2017 (08:51 IST)
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಮಾಡಿದ್ದು ಸಂಘ ಪರಿವಾರದ ಸದಸ್ಯರು ಎಂದು ಕೆಲವು ವಿಚಾರವಾದಿಗಳು ಬಹಿರಂಗವಾಗಿ ಆರೋಪ ಮಾಡುತ್ತಿದ್ದಾರೆ. ಇನ್ನು ಮುಂದೆ ಹೀಗೆ ಮಾಡುವ ಮುನ್ನ ಹುಷಾರ್!
ಗೌರಿ ಹತ್ಯೆ ಮಾಡಿದ್ದು ಸಂಘ ಪರಿವಾರದವರು ಎಂದು ಸುಖಾ ಸುಮ್ಮನೇ ಸಾಮಾಜಿಕ ಜಾಲತಾಣಗಳಲ್ಲಿ, ಬಹಿರಂಗ ವೇದಿಕೆಗಳಲ್ಲಿ ಆರೋಪ ಮಾಡಿದರೆ ಕೇಸು ದಾಖಲಿಸುವುದಾಗಿ ರಾಜ್ಯ ಬಿಜೆಪಿ ಎಚ್ಚರಿಕೆ ನೀಡಿದೆ.
ಗೌರಿ ಲಂಕೇಶ್ ಹತ್ಯೆಯಾಗಿದ್ದಕ್ಕೆ ನಮಗೆ ಬೇಸರವಿದೆ. ಆದರೆ ಅದೇ ನೆಪ ಇಟ್ಟುಕೊಂಡು ಕೆಲವು ವಿಚಾರವಾದಿಗಳು ಆರ್ ಎಸ್ ಎಸ್ ಸಂಘಟನೆ ಮೇಲೆ ಗೂಬೆ ಕೂರಿಸಿದರೆ ಸುಮ್ಮನಿರಲ್ಲ ಎಂದು ಬಿಜೆಪಿ ಎಚ್ಚರಿಸಿದೆ. ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಬಿಜೆಪಿ ಎಚ್ಚರಿಕೆ ನೀಡಿದೆ.