Select Your Language

Notifications

webdunia
webdunia
webdunia
webdunia

ಹಬ್ಬ ಆಚರಣೆ ಕುರಿತು ರಾಷ್ಟ್ರಪತಿ ಹೇಳಿದ್ದೇನು ಗೊತ್ತಾ?

ರಾಷ್ಟ್ರಪತಿ
ನವದೆಹಲಿ , ಶುಕ್ರವಾರ, 26 ಅಕ್ಟೋಬರ್ 2018 (20:00 IST)
ಶಾಂತಿ ಹಾಗೂ ಸೌಹಾರ್ದತೆಯಿಂದ ಜನರು ಹಬ್ಬಗಳನ್ನು ಆಚರಣೆ ಮಾಡಬೇಕು. ಹೀಗಂತ ರಾಷ್ಟ್ರಪತಿ ಹೇಳಿದ್ದಾರೆ.
ಪರಿಸರಕ್ಕೆ ಹಾನಿಯಾಗದಂತೆ ಹಬ್ಬಗಳನ್ನು ಆಚರಣೆ ಮಾಡಬೇಕು. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಸಾಮಾಜಿಕ ಸಂಘಟನೆಗಳು ತೊಡಗಿಕೊಳ್ಳಬೇಕೆಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.

ಅಂತರಾಷ್ಟ್ರೀಯ ಆರ್ಯ ಮಹಾಸಮ್ಮೇಳನ ಉದ್ಘಾಟನೆ ಮಾಡಿ ಮಾತನಾಡಿದ ಅವರು, ರಾಜಧಾನಿಯಲ್ಲಿ ಪರಿಸರ ತೀವ್ರವಾಗಿ ಹದಗೆಟ್ಟಿದೆ. ದಸರಾ ಸಂದರ್ಭದಲ್ಲಿ ಪ್ರತಿಕೃತಿಗಳ ದಹನ, ಪಟಾಕಿಗಳು ಹಾಗೂ ರೈತರು ಕೃಷಿ ತ್ಯಾಜ್ಯಗಳಿಗೆ ಬೆಂಕಿ ಹಚ್ಚುತ್ತಿರುವ ಕಾರಣದಿಂದ ಹೀಗಾಗುತ್ತಿದೆ.

ಈ ದಿಸೆಯಲ್ಲಿ ಪರಿಸರ ಉಳಿಸುವ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಮಂಡ್ಯದಲ್ಲಿ ಕಾವೇರಿದ ಬಿಜೆಪಿ-ಜೆಡಿಎಸ್ ಪ್ರಚಾರ