Select Your Language

Notifications

webdunia
webdunia
webdunia
webdunia

ಮಕ್ಕಳು ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆಂದು ತಾಯಿ ಮಾಡಿದ್ದೇನು ಗೊತ್ತಾ?

ಮಂಡ್ಯ
ಮಂಡ್ಯ : ಮಕ್ಕಳು ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿರುವುದರಿಂದ ನೊಂದ ತಾಯಿಯೊಬ್ಬಳು ತನ್ನ ಎರಡು ಗಂಡು ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಾಗಮಂಗಲ ತಾಲೂಕಿನ ಶಿವನಹಳ್ಳಿ ಗ್ರಾಮದಲ್ಲಿ ನಡೆದಿದೆ.


ಪುಟ್ಟಮ್ಮ (25) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಸಂತೋಷ್ (2) ಹಾಗೂ ಸಾತ್ವಿಕ್ (7) ತಾಯಿಯಿಂದ ಹತ್ಯೆಯಾದ ದುರ್ದೈವಿ ಮಕ್ಕಳು. ಮಕ್ಕಳಿಗೆ ಯಾವಾಗಲೂ ಆರೋಗ್ಯ ಕೆಡುತ್ತಿದ್ದರಿಂದ ಬೇಸತ್ತ ತಾಯಿ ಪುಟ್ಟಮ್ಮ ತನ್ನ ಎರಡು ಮಕ್ಕಳನ್ನು ನೀರಿನ ಡ್ರಮ್‍ನಲ್ಲಿ ಮುಳುಗಿಸಿ ಸಾಯಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.


ಈ ಕುರಿತು ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಯಿ ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಳಿಯನ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿ ಕೊಂದ ಅತ್ತೆ