Daily Horoscope
✕

ಪ್ರಿಯಕರನೊಂದಿಗೆ ಸೇರಿ ಆಕೆ ಮಾಡಿದ ಕೆಲಸವಾದರೂ ಎಂಥದ್ದು ಗೊತ್ತಾ?

Webdunia
ಸೋಮವಾರ, 16 ಜುಲೈ 2018 (15:34 IST)
ಆತ ತನ್ನ ಪತ್ನಿಯೇ ಸರ್ವಸ್ವ ಎಂದು ಜೀವನ ನಡೆಸುತ್ತಿದ್ದನು. ಕುಟುಂಬದ ಕಣ್ಣಾಗಿರಬೇಕಾಗಿದ್ದ ಪತ್ನಿಯ ಕಣ್ಣು ಮಾತ್ರ ಬೇರೆಬ್ಬರ ಮೇಲಿತ್ತು. ಹೀಗಾಗಿ ತನ್ನಪ್ರಿಯಕರನೊಂದಿಗೆ ಸೇರಿದ ಆಕೆ ತನ್ನ ಪತಿಗೆ ಮಾಡಿದ್ದನ್ನು ಕೇಳಿದರೆ ನಿಜಕ್ಕೂ ಶಾಕ್ ಆಗ್ತೀರಾ…!

ಅನೈತಿಕ ಸಬಂಧ ಹಿನ್ನೆಲೆಯಲ್ಲಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹತ್ಯೆ ಮಾಡಿದ್ದ ಪತ್ನಿ ಮತ್ತು ಪ್ರೀಯಕರನನ್ನು ಬಂಧಿಸುವಲ್ಲಿ ಹುಬ್ಬಳ್ಳಿಯ ನವನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿಯ ಬಲ್ಡೋಜರ ನಿವಾಸಿ, ಮಹ್ಮದ ರಫೀಕ್ (40)  ಆಯಟ್ಟಿಯನ್ನು ಜೂನ್ 11 ರಂದು ಪತ್ನಿ ಶಬಾನಾ ಆಯಟ್ಟಿ ಹಾಗೂ ಪ್ರಿಯಕರ ಬಾಷಾಸಾಬ್ ಧಾರವಾಡ ಇಬ್ಬರು ಸೇರಿ, ಹುಬ್ಬಳ್ಳಿ ಮಾರಡಗಿ ರಸ್ತೆಯಲ್ಲಿ ಕೊಡಲಿಯಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದರು.

ಕಳೆದ 10 ವರ್ಷದ ಹಿಂದೆ ಮಹ್ಮದ ರಫೀಕ್ ಮತ್ತು  ಶಬಾನಾ ಇಬ್ಬರು ಮದುವೆ ಆಗಿದ್ದರು. ಆದ್ರೆ ಪತ್ನಿ ಶಬಾನಾ ಭಾಷಾಸಾಬ್  ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಈ‌ ವಿಷಯ ಪತಿಗೆ ಗೊತ್ತಾಗಿದ್ದು, ಇದನ್ನು ಪ್ರಶ್ನೆ ಮಾಡಿದ ಪತಿಯನ್ನು ಪತ್ನಿ ಮತ್ತು ಪ್ರಿಯಕರ ಮತ್ತು  ಶಬನಾ ಕೊಡಲಿಯಿಂದ ಕೊಚ್ವಿ ಕೊಲೆ ಮಾಡಿ ಪರಾರಿಯಾಗಿದ್ದರು. ಈ ಮೊದಲು  ಹುಬ್ಬಳ್ಳಿಯ ನವನಗರ  ಪೊಲೀಸರು ಅಪರಿಚಿತ ಶವ ಎಂದು ಪ್ರಕರಣ ದಾಖಲಿಸಿದ್ದರು. ಬಳಿಕ  ಹೆಂಡತಿಯನ್ನು ಪೊಲೀಸ್ ಠಾಣೆಗೆ‌ ಕರೆಯಿಸಿ ವಿಚಾರಣೆ ಮಾಡಿದಾಗ, ಹೆಂಡತಿ ಸತ್ಯ ಬಾಯಿ ಬಿಟ್ಟಿದ್ದಾಳೆ. ಬಳಿಕ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಬಿಜೆಪಿ ನಾಯಕರು

ಮುಸ್ಲಿಮರೇ ಫಸ್ಟ್ ಎಂದಿದ್ದ ಅರವಿಂದ ಬೋಳಾರ್ ಈಗ ಕೈ ಮುಗಿದು ಹೀಗೆ ಬೇಡಿಕೊಂಡ್ರು

ದೇಶಸೇವೆಗೆ ಸಮರ್ಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೀ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಏಯ್ ನೀನೂ ಸ್ವಲ್ಪ ತಿನ್ನೋ… ನಂದಿ ತಿನ್ನಲಿಲ್ಲವೆಂದು ಕೋತಿ ಏನು ಮಾಡ್ತು ನೋಡಿ Video

ಮುಂದಿನ ಸುದ್ದಿ
Show comments