ಅಣ್ಣ ಶಿವಕುಮಾರ್ ಸಿಎಂ ಆಗುವ ಭವಿಷ್ಯದ ಬಗ್ಗೆ ಡಿಕೆ ಸುರೇಶ್ ಹೇಳಿದ್ದೇನು ಗೊತ್ತಾ

Sampriya
ಭಾನುವಾರ, 16 ನವೆಂಬರ್ 2025 (12:49 IST)
ಬೆಂಗಳೂರು: ನನ್ನ ಅಣ್ಣ ಡಿಕೆ ಶಿವಕುಮಾರ್‌ ಸಿಎಂ ಆಗಬೇಕೆಂಬ ಮಾತನ್ನು ನಾನು ಅನೇಕ ಬಾರಿ ಸ್ಪಷ್ಟವಾಗಿ ಹೇಳಿದ್ದೇನೆ ಎಂದು  ಮಾಜಿ ಸಂಸದ, ಬಮೂಲ್ ಅಧ್ಯಕ್ಷ ಡಿಕೆ ಸುರೇಶ್ ಅವರು ಹೇಳಿದರು. 

ಮಾಧ್ಯಮಗಳ ಜತೆ ಮಾತನಾಡಿದ ಅವರು, ಸಂಪುಟ ಪುನಾರಚನೆ ಆದರೆ ನಾಯಕತ್ವ ಬದಲಾವಣೆಯಾಗಲ್ಲ ಎಂಬ ಬಗ್ಗೆ ನನಗೆ ಮಾಹಿತಿಯಿಲ್ಲ . ಅದೆಲ್ಲವನ್ನೂ ಹೈಕಮಾಂಡ್ ನಿರ್ಧಾರ ಮಾಡುತ್ತೆ. ಈ ಬಗ್ಗೆ ಅವರ ನಿರ್ಧಾರವೇ ಅಂತಿಮ. ಈ ಬೆಳವಣಿಗೆ ಬಗ್ಗೆ ಕಾದುನೋಡಬೇಕಿದೆ ಎಂದರು. 

ಬಿಹಾರ ಚುನಾವಣೆಯ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಅವರು,  ಪ್ರಜಾಪ್ರಭುತ್ವದಲ್ಲಿ ಸೋಲು ಗೆಲುವು ಇದ್ದೇ ಇರುತ್ತದೆ. ಬಿಹಾರದಲ್ಲಿ ನಮ್ಮ ರಾಜ್ಯದಂತೆ ಅಲ್ಲಿಯೂ ಗ್ಯಾರಂಟಿ ಅನುಷ್ಠಾನ ಮಾಡಿದ್ದರು. ಈ ಕಾರಣದಿಂದ ಮಹಿಳಾ ಮತದಾರರು ಎನ್‌ಡಿಎ ಪರ ಒಲವು ವ್ಯಕ್ತಪಡಿಸಿದ್ದಾರೆ ಎಂದರು. 

ಜನರು ತೀರ್ಪು ನೀಡಿದ್ದನ್ನು ನಾವು ಸ್ವಾಗತ ಮಾಡುತ್ತೇವೆ. ಪಕ್ಷಕ್ಕೆ ಸೋಲು ಗೆಲುವು ಹೊಸದೇನಲ್ಲ. ಆದರೆ ನಿರಂತರವಾಗಿ ವಿರೋಧ ಪಕ್ಷವಾಗಿದ್ದರೂ ಪಕ್ಷ ಸಂಘಟಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮಸ್ಥಳ ಬುರುಡೆ ಕೇಸ್‌ನಲ್ಲಿ ಮಹತ್ವದ ಬೆಳವಣಿಗೆ

Karnataka Weather:ಕರಾವಳಿಯಲ್ಲಿ ಮಳೆ ನಿರೀಕ್ಷೆ, ಉತ್ತರ ಕರ್ನಾಟಕದಲ್ಲಿ ಶೀತಗಾಳಿ ಸಾಧ್ಯತೆ

ಡಾ ಸಿಎನ್ ಮಂಜುನಾಥ್ ಪ್ರಕಾರ ಬಿಪಿ ಇರುವವರು ಇದೊಂದು ತಪ್ಪು ಮಾಡಬಾರದು

ಶಬರಿಮಲೆ ಯಾತ್ರೆಗೆ ಬರುವ ಭಕ್ತರಿಗೆ ವಿಶೇಷ ಷರತ್ತು ಹಾಕಿದ ಕೇರಳ ಆರೋಗ್ಯ ಇಲಾಖೆ

ಮುಡಾ ಹಗರಣ: ತನಿಖಾ ಸ್ಥಿತಿಗತಿ ವರದಿ ಸಲ್ಲಿಸಿದ ಲೋಕಾಯುಕ್ತರು

ಮುಂದಿನ ಸುದ್ದಿ
Show comments