ಕರೊನಾ ಲಸಿಕೆ ಅಭಿಯಾನದಲ್ಲಿ ಮುಂಚೂಣಿಯಲ್ಲಿರುವ ಭಾರತ ಇಂದಿನಿಂದ 12ರಿಂದ 14ರ ವಯೋಮಾನದ ಮಕ್ಕಳಿಗೂ ಲಸಿಕೆ ನೀಡಲು ಆರಂಭಿಸಿದೆ. ಅದರಲ್ಲೂ ಈ ವಯೋಮಾನದವರಿಗೆ ನೀಡಲಾಗುತ್ತಿರುವ ಏಕೈಕ ಲಸಿಕೆ ಎಂದರೆ 'ಕಾರ್ಬೆವ್ಯಾಕ್ಸ್'.
ಇನ್ನು ಇದು ಕರೊನಾ ವಿರುದ್ಧ ಭಾರತದ ಮೂರನೇ ಲಸಿಕೆಯಾಗಿದ್ದು, ಉಚಿತ ಲಸಿಕೀಕರಣ ನಡೆಯುವ ಎಲ್ಲ ಕೇಂದ್ರಗಳಲ್ಲೂ ಈ ಲಸಿಕೆ ಲಭ್ಯವಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.
ಅಂದಹಾಗೆ ಈ ಲಸಿಕೆ ಸರ್ಕಾರಕ್ಕೆ 145 ರೂಪಾಯಿ ಕಟ್ ಪ್ರೈಸ್ನಲ್ಲಿ ಬರುತ್ತಿದೆ. ಇದು ಜಗತ್ತಿನಲ್ಲೇ ಅತ್ಯಂತ ಕಡಿಮೆ ದರದ ಲಸಿಕೆ ಎನ್ನಲಾಗಿದೆ. ಮತ್ತೊಂದೆಡೆ ಇದೇ ಲಸಿಕೆ ಮಾರುಕಟ್ಟೆಯಲ್ಲಿ ತೆರಿಗೆ ಇಲ್ಲದೆ 800 ರೂಪಾಯಿಗೆ ಸಿಗಲಿದೆ ಎಂಬುದಾಗಿ ಮೂಲಗಳು ತಿಳಿಸಿವೆ.