Daily Horoscope

Select Your Language

Notifications

webdunia
webdunia
webdunia
webdunia

ಎಂಥ ಪರಿಸ್ಥಿತಿಯಲ್ಲಿ ಕೂಡ ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡೋಕೆ ಹೋಗಬೇಡಿ, Video

B Sriramulu
ಕುಡತಿನಿ: ಎಂತಹ ಪರಿಸ್ಥಿತಿಯಲ್ಲಿ ಆದರೂ ಪಾದಯಾತ್ರೆಯ ಸಮಾರೋಪಕ್ಕೆ ಬಳ್ಳಾರಿಯ 'ಮುನ್ಸಿಪಲ್ ಸ್ಕೂಲ್ ಮೈದಾನ'ವನ್ನು ಕೊಡಬೇಕು ಅಂತ ಬೆಳಿಗ್ಗೆಯಿಂದ ಕೂಡ ನಾವು ಅನೇಕ ಮಾಧ್ಯಮಗಳ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ಕೊಡುವಂತಹ ಕೆಲಸ ಮಾಡಿದ್ದೇವೆ. ಈಗ ಸರ್ಕಾರ ಅದೇ ಮೈದಾನವನ್ನು ಕೊಡಲು ಒಪ್ಪಿಗೆ ಸೂಚಿಸಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಹೇಳಿದ್ದಾರೆ.'

ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ನಂತರ, ನಮ್ಮ ದೃಢವಾದ ಹೋರಾಟಕ್ಕೆ ಮಣಿದು ಪುನಃ ಅದೇ ಮುನ್ಸಿಪಲ್ ಸ್ಕೂಲ್ ಮೈದಾನವನ್ನು ನಮಗೆ ಅವಕಾಶ ಮಾಡಿಕೊಡುವಂತಹ ಕೆಲಸ ಆಗಿದೆ. "ಎಂಥ ಪರಿಸ್ಥಿತಿಯಲ್ಲಿ ಕೂಡ ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡೋಕೆ ಹೋಗಬೇಡಿ. ನಾವು ಒಂದನೇ ತಾರೀಕು ಪ್ರಾರಂಭವಾದಂತಹ ಸಂದರ್ಭದಲ್ಲಿ ನಾವು ಹೇಳಿದೀವಿ, ನಾವು ಬಳ್ಳಾರಿಗೆ ಬರ್ತಾ ಇದ್ದೀವಿ, ನಮಗೊಂದು ಗ್ರೌಂಡ್ ಅನ್ನು ಅವಕಾಶ ಮಾಡಿಕೊಡಬೇಕು" ಅಂತ ನಾನು ಮುಖ್ಯಮಂತ್ರಿಗಳಿಗೆ ಮತ್ತು ಜಿಲ್ಲಾಡಳಿತಕ್ಕೆ ಹೇಳಿದ್ದೆ ಎಂದು ಗಮನ ಸೆಳೆದರು.

"ಊರ ಹೊರಗಡೆ ಹೋಗಿ ಮಾಡ್ರಿ" ಅಂತ ಅವರು ಹೇಳ್ತಾ ಇದ್ರು, ನಾವು ಊರಿನ ಮಂದಿ. ಕಾಡಲ್ಲಿ ಮಾಡೋದಕ್ಕೆ, ಕಾಡಿನ ಮನುಷ್ಯರೇನಲ್ಲ ನಾವು. "ನಾವು ಊರಲ್ಲಿ ಇದ್ದಂತವರು, ಊರಲ್ಲಿ ಅವಕಾಶ ಮಾಡಿಕೊಡ್ರಿ" ಅಂತ ಕೇಳಿದರೆ, ಕಾಡಲ್ಲಿ ಹೋಗಿ ಮಾಡ್ರಿ ಅಂದ್ರೆ ಹೆಂಗೆ? ಅವರು ಹೇಳಿದಂಗೆ ನಾವು ಕೇಳಕ್ಕಾಗುತ್ತೇನು? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಅವರು ನಮ್ಮ ಅಧಿಕಾರದಲ್ಲಿ ಇದ್ದಂತಹ ವೇಳೆ ಅನೇಕ ಬಾರಿ ಸಮಾವೇಶ ಮಾಡಿದ್ದಾರೆ. ಆಗ ಅಡ್ಡಿಪಡಿಸುವಂತಹ ಕೆಲಸ ಆಗಲಿಲ್ಲ ಎಂದು ನಾನು ಬೆಳಿಗ್ಗೆಯಿಂದ ಕೇಳಿದ್ದೆ. ನಮ್ಮ ಆ ಹೋರಾಟವನ್ನು ಹತ್ತಿಕ್ಕಬೇಕು ಅನ್ನೋ ಕಾರಣದಿಂದ ಇವತ್ತು ಬೇರೆ ಕಡೆ ಹೋಗಿ ಮಾಡಿ ಅಂತ ಹೇಳಿದ್ದಾಗಿ ಆಕ್ಷೇಪಿಸಿದರು.

ನಿಮ್ಮ ನಾಯಕರಾದಂತಹ, ಟಿ-ಶರ್ಟಿನ ನಾಯಕ ರಾಹುಲ್ ಗಾಂಧಿಯವರಿಗೆ ಆದ್ರೆ ಆ 'ಭಾರತ್ ಜೋಡೋ'ದಲ್ಲಿ ಬಂದಾಗ ಅದೇ ಮೈದಾನದಲ್ಲಿ ನೀವು ಅವಕಾಶ ಮಾಡಿಕೊಟ್ಟಿದ್ದೀರಿ. ನಮಗೇನು ಇವತ್ತು ಬೇಡ ಅಂತ ಇದ್ದೀರಿ?" ಅನ್ನುವ ಆಕ್ರೋಶವನ್ನು ಕೂಡ ವ್ಯಕ್ತಪಡಿಸಿದ್ದೆ. ನಮ್ಮ ಹೋರಾಟದ, ನಾವೆಲ್ಲರೂ ಕೂಡ ಒಟ್ಟಾಗಿ 'ನೀವು ಕೊಡಲೇಬೇಕು' ಅಂತ ಆಗ್ರಹಿಸಿದ ಸಂದರ್ಭದಲ್ಲಿ, ಈಗ ಇವತ್ತು ಸರ್ಕಾರ ಅದೇ ಗ್ರೌಂಡ್ ಅನ್ನು ಫಿಕ್ಸ್ ಮಾಡುವಂತಹ ಕೆಲಸ ಮಾಡಿದೆ ಎಂದು ವಿವರಿಸಿದರು.




Share this Story:

Follow Webdunia kannada

ಮುಂದಿನ ಸುದ್ದಿ

40ವರ್ಷದಿಂದ ಕಾಂಗ್ರೆಸ್‌ಗೆ ಮತ ಹಾಕಿದವರಿಗೆ ಶಿವಕುಮಾರ್‌ ಯಾರೆಂಬುದೇ ಗೊತ್ತಿಲ್ಲ: ಬಿಜೆಪಿ ಲೇವಡಿ