Select Your Language

Notifications

webdunia
webdunia
webdunia
webdunia

ದುಷ್ಟ ಸರ್ಕಾರವನ್ನ ಜನ ಓಡಿಸುತ್ತಿದ್ದಾರೆ ಎಂದು ಬಿಜೆಪಿ ವಿರುದ್ದ ಕಿಡಿಕಾರಿದ ಡಿಕೆಶಿ

DKshi lashed out at the BJP saying that the people are running an evil government
bangalore , ಮಂಗಳವಾರ, 24 ಜನವರಿ 2023 (14:34 IST)
ಏನ್ರಿ ೩೫ ಸಾವಿರ ಕೋಟಿ ಹಗರಣ ಅಂದ್ರೆ ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.ಬಿಜೆಪಿಯವರ ಪ್ರತಿಯೊಂದು ಹಗರಣ ಬಿಚ್ಚಿ ಇಟ್ಟಿದ್ದೀವಲ್ಲ,ಬಿಜೆಪಿಯವರು ಪ್ರತಿಯೊಂದು ಔಷಧಿ ಬೆಡ್ ನಲ್ಲೂ ಸ್ಕ್ಯಾಂ ಮಾಡಿದ್ದಾರೆ  ಎಂದು ಬೆಜೆಪಿ ವಿರುದ್ದ ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ.
 
 ಎಸ್.ಸಿ ಎಸ್.ಟಿ ಕಾರ್ಪೋರೇಷನ್ ಎಂಡಿಯನ್ನು ನಿನ್ನೆ ಸಸ್ಪೆಂಡ್ ಮಾಡಿದ್ದೀರಿ.ಕೋಟ್ಯಾಂತರ ರೂಪಾಯಿ ದಲಿತರ ಮಠಮಾನ್ಯಗಳ ದುಡ್ಡನ್ನು ಕಮಿಷನ್ ಹೊಡೆದಿದ್ದೀರಲ್ಲ.ನೀವು ತಿಂದು ಕಾಂಗ್ರೆಸ್ ಮೂತಿಗೆ ಒರೆಸುವ ಪ್ರಯತ್ನ ಮಾಡ್ತಿದ್ದೀರಿ.ಟೆಂಟ್ ಗಿಂಟ್ ಪ್ಯಾಕ್ ಮಾಡ್ಕೊಂಡು ವಿಧಾನಸೌಧವನ್ನು ಡೆಟಾಲ್ ಹಾಕಿ ಕ್ಲೀನ್ ಮಾಡಿದ್ರಿ.ದುಷ್ಟ ಸರ್ಕಾರವನ್ನು ಜನ ಓಡಿಸ್ತಿದ್ದಾರೆ.
 
ನಾನೂ ಗಂಜಲ ಗಿಂಜಲ ತಂದು ಕ್ಲೀನ್ ಮಾಡ್ತೀನಿ.ಸುಧಾಕರ ಮೇಲೆ ಭ್ರಷ್ಟಾಚಾರದ ಕೂಪ ಕೂತಿದೆ.ಮುತ್ತು ರತ್ನಗಳೆಲ್ಲೆ ಇದಾರಲ್ಲ ಬಿಜೆಪಿ ಕೈಲಿ.ಆಪರೇಷನ್ ಲೋಟಸ್ ಆದವರ ಕೈಯ್ಯಲ್ಲೇ ಮಾತಾಡಿಸ್ತೀರಲ್ಲ.ನಮ್ಮ ಬಸ್ ಫುಲ್ ಆಗಿದೆ ಯಾರನ್ನೂ ನಾವು ಕರೆದುಕೊಳ್ಳಲ್ಲ ಬಿ ರಿಪೋರ್ಟ್ ಸರ್ಕಾರ ಇದು ಎಂದು ಡಿಕೆಶಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಭ್ರಷ್ಟಾಚಾರಗಳಿಗೆ ಕಾಂಗ್ರೆಸ್ನ ನೆರವು : ಸುಧಾಕರ್