Webdunia - Bharat's app for daily news and videos

Install App

ಡಿಕೆ ಶಿವಕುಮಾರ್ ಹನಿಟ್ರ್ಯಾಪ್‌ ಟೀಂ ರಾತ್ರಿ 2ಕ್ಕೆ ಸಭೆ ಸೇರುತ್ತೆ: ಮುನಿರತ್ನ ಹೊಸ ಬಾಂಬ್‌

Sampriya
ಗುರುವಾರ, 20 ಮಾರ್ಚ್ 2025 (19:06 IST)
ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಅವರು ನನ್ನ ಮೇಲೆ ರೇಪ್ ಹಾಕಿಸಿದ್ದು ಎಂದು ಶಾಸಕ ಮುನಿರತ್ನ ಗಂಭೀರ ಆರೋಪ ಮಾಡಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪೊಲೀಸ್ ಕಮೀಷನರ್‌ಗೆ ಹೇಳಿ ಡಿಸಿಎಂ ಡಿ.ಕೆ.ಶಿವಕುಮಾರ್ ನನ್ನ ಮೇಲೆ ರೇಪ್ ಕೇಸ್ ಹಾಕಿಸಿದ್ದರು. ಅಟ್ರಾಸಿಟಿ ಕೇಸಲ್ಲಿ ಕೋರ್ಟ್‌ಗೆ ಹೋಗಿದ್ದಾಗ ರಾಜೀನಾಮೆ ಕೊಟ್ಟರೆ ರೇಪ್ ಕೇಸ್ ಹಾಕಲ್ಲ ಎಂದು ಡಿವೈಎಸ್‌ಪಿ ಧರ್ಮೇಂದ್ರ ನೇರವಾಗಿ ಈ ಮಾತನ್ನು ಹೇಳಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಡಿ.ಕೆ ಶಿವಕುಮಾರ್ ಹಾಗೂ ಡಿ.ಕೆ ಸುರೇಶ್ ಸೇರಿ ನನಗೆ ಮೊಟ್ಟೆ ಹೊಡೆಯಲು ಹಾಗೂ ಮಸಿ ಬಳಿಯಲು ಎಲ್ಲದಕ್ಕೂ ರೇಟ್ ಫಿಕ್ಸ್ ಮಾಡಿದ್ದಾರೆ. ನನ್ನ ಮೇಲೆ ಸಿಬಿಐ ತನಿಖೆ ಮಾಡಿಸಿ ರೇಪ್ ಕೇಸ್ ಹಾಕಿಸಿದ್ದರು ಎಂದು ಸ್ಫೋಟಕ ಹೇಳಿಕೆ ನೀಡಿದರು.

ಡಿಕೆಶಿ ಮಾಡಿರುವ ಮಹಾ ಪಾಪ, ಎಂದಿಗೂ ಅವರನ್ನ ಬಿಡಲ್ಲ. ನಿಮ್ಮ ಕುಟುಂಬ ಬೆಳೆಯಬೇಕು, ನೀವು ಇನ್ನೂ ಮುಂದೆ ಇಂತಹ ನೀಚ ಕೆಲಸ ಮಾಡಬಾರದು. ನಾನು ಅತ್ಯಾಚಾರ ಮಾಡಿದ್ದರೆ ನಾನು ಸರ್ವನಾಶ ಆಗುತ್ತೇನೆ, ಹುಳ ಬಿದ್ದು ಸಾಯಬೇಕು. ಇ್ಲಲದಿದ್ದರೆ ನೀವು ಹುಳ ಬಿದ್ದು ಸಾಯುತ್ತೀರಾ ಎಂದು ಶಾಪ ಹಾಕಿದರು.

ಡಿಕೆಶಿ ಬಳಿ ₹20 ಇಲ್ಲದಾಗಲೂ ನೋಡಿದವರು ರಾಜಣ್ಣ ಅವರು. ದೇವರು ಇಂದು ನಿಮ್ಮನ್ನೂ ಈ ಮಟ್ಟಕ್ಕೆ ತಂದಿದ್ದಾನೆ. ಆದರೆ ನೀವು ಈ ರೀತಿಯ ಕೀಳು ಮಟ್ಟಕ್ಕೆ ಹೋಗಬಾರದು.  ಇದು ಡಿಕೆ ಶಿವಕುಮಾರ್ ಹನಿಟ್ರ್ಯಾಪ್‌ ಟೀಂ, ರಾತ್ರಿ 2 ಗಂಟೆಗೆ ಹನಿಟ್ರ್ಯಾಪ್‌ ಟೀಂ ಜೊತೆ ಸಭೆ ಮಾಡ್ತಾರೆ ಎಂದು ಹೇಳಿದರು<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments