ಡಿಕೆ ಶಿವಕುಮಾರ್‌ಗೆ ಸಿಎಂ ಸ್ಥಾನ ಸಿಗಬೇಕು: ಶಾಸಕ ಇಕ್ಬಾಲ್ ಹುಸೇನ್‌

Sampriya
ಬುಧವಾರ, 6 ಆಗಸ್ಟ್ 2025 (16:34 IST)
ರಾಮನಗರ: ಈಗಾಲೂ ಡಿಸಿಎಂ ಡಿಕೆ ಶಿವಕುಮಾರ್‌ ಅವರಿಗೆ ಸಿಎಂ ಸ್ಥಾನ ಸಿಗಬೇಕೆಂದು ಹೇಳುತ್ತೇನೆ ಎಂದು ಶಾಸಕ ಇಕ್ಬಾಲ್ ಹುಸೇನ್ ಪ್ರತಿಕ್ರಿಯಿಸಿದ್ದಾರೆ. 

ಕರ್ನಾಟಕ ಸಿಎಂ ಕುರ್ಚಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಸಂದರ್ಭದಲ್ಲಿ ನಾನು ಸಿಎಂ ಆಗಿ ಡಿಕೆ ಶಿವಕುಮಾರ್‌ ಆಯ್ಕೆ ಆಗಬೇಕೆಂಬುದನ್ನು ಹೇಳುತ್ತೇನೆ. ಈಗಲೂ ನನ್ನ ಹೇಳಿಕೆಯನ್ನ ನಾನು ಸಮರ್ಥಿಸಿಕೊಳ್ಳುತ್ತೇನೆ. ಡಿಕೆಶಿಯವರಿಗೆ ಸ್ಥಾನಮಾನ, ಗೌರವ ಕೊಡಿ ಅಂತ ಕೇಳೋಕೆ ನನಗೆ ಹಕ್ಕಿಲ್ವಾ. ನಾನು ಈ ಜಿಲ್ಲೆಯಲ್ಲಿ ಹುಟ್ಟಿದ್ದೀನಿ, ಅವರು ನಮ್ಮ ಜೊತೆ ಹುಟ್ಟಿದ್ದಾರೆ. ಅವರ ಹೋರಾಟಕ್ಕೆ ಬೆಲೆ ಇಲ್ವಾ ಎಂದು ಪ್ರಶ್ನೆ ಮಾಡಿದರು. 

ಇನ್ನೂ ಆ.8ಕ್ಕೆ ಚುನಾವಣಾ ಅಕ್ರಮದ ವಿರುದ್ಧ ಕಾಂಗ್ರೆಸ್ ಹೋರಾಟ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಚುನಾವಣಾ ಆಯೋಗದ ಹೋರಾಟಕ್ಕೆ ಹೈಕಮಾಂಡ್ ರೂಪುರೇಷೆ ನೀಡಿದೆ. 

ರಾಷ್ಟ್ರೀಯ ನಾಯಕರ ನೇತೃತ್ವದಲ್ಲಿ ನಡೆಯುವ ಹೋರಾಟಕ್ಕೆ ಶಕ್ತಿ ತುಂಬುವ ಕೆಲಸವನ್ನು ನಾವೆಲ್ಲರೂ ಮಾಡಬೇಕು. 

ನಮ್ಮ ಜಿಲ್ಲೆಯಿಂದ ಸುಮಾರು 20ಸಾವಿರ ಮಂದಿ ಭಾಗಿಯಾಗುತ್ತಿದ್ದೇವೆ. ಅವರ ಹೋರಾಟಕ್ಕೆ ನಾವು ಬೆಂಬಲ ಕೊಡುತ್ತೇವೆ. ಇವಿಎಂ ತೊಂದರೆಯಾ? ಏನು ಆಗಿದೆ ಎಂಬುದು ನಮಗೆ ಗೊತ್ತಿಲ್ಲ. ಯಾವ ರೀತಿ ಅಕ್ರಮ ಆಗಿದೆ ಎಂಬುದರ ಬಗ್ಗೆ ನಮ್ಮ ರಾಷ್ಟ್ರ ನಾಯಕರು ಮಾಹಿತಿ ಕೊಡುತ್ತಾರೆ ಎಂದು ತಿಳಿಸಿದರು. <>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ದು, ಡಿಕೆಶಿ ಕುರ್ಚಿ ಕಿತ್ತಾಟದ ನಡುವೆ ಈ ಸಚಿವನಿಗೆ ಸಿಎಂ ಸ್ಥಾನ ನೀಡಬೇಕೆಂದ ಮುನಿ ಸ್ವಾಮೀಜಿ

ದೆಹಲಿ ನಮ್ಮ ದೇವಸ್ಥಾನ, ಸಿಎಂ ಕುರ್ಚಿ ಕಿತ್ತಾಟದ ನಡುವೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ

ಡಿಕೆಶಿ ಪರ ಸ್ವಾಮೀಜಿಗಳು, ಸಿದ್ದರಾಮಯ್ಯ ಪರ ಕುರುಬರ ಸಂಘ ಹೋರಾಟದ ಎಚ್ಚರಿಕೆ

ಉಡುಪಿಯಲ್ಲಿ ಪ್ರಧಾನಿ ಮೋದಿ ಕರೆಕೊಟ್ಟ 9 ಸಂಕಲ್ಪಗಳು ಯಾವುವು ನೋಡಿ

ನಾಯಕತ್ವ ಬದಲಾವಣೆ ಕಿಚ್ಚಿನ ನಡುವೆ ಡಿಕೆಶಿಯನ್ನು ಭೇಟಿಯಾದ ಶಾಸಕರು ಇವರೇ

ಮುಂದಿನ ಸುದ್ದಿ
Show comments