Daily Horoscope

ಇದೊಂದು ವಿಚಾರದಲ್ಲಿ ತಾನು ಡಿಫರೆಂಟ್ ಎಂದು ಪ್ರೂವ್ ಮಾಡ್ತಿದ್ದಾರೆ ಡಿಕೆ ಶಿವಕುಮಾರ್

ಕೃಷ್ಣವೇಣಿ ಕೆ
ಮಂಗಳವಾರ, 9 ಜೂನ್ 2026 (09:28 IST)
Photo Credit: X
ಬೆಂಗಳೂರು: ಇದೊಂದು ವಿಚಾರದಲ್ಲಿ ತಾವು ಎಲ್ಲರಿಗಿಂತ ಭಿನ್ನ ಎಂದು ಸಿಎಂ ಡಿಕೆ ಶಿವಕುಮಾರ್ ನಿರೂಪಿಸುತ್ತಿದ್ದಾರೆ. ಡಿಕೆ ಶಿವಕುಮಾರ್ ಈ ಒಂದು ವರ್ತನೆ ವಿಪಕ್ಷಗಳನ್ನೂ ದಂಗಾಗಿಸುತ್ತಿದೆ.
 

ಪ್ರಮಾಣ ವಚನಕ್ಕೆ ಮುನ್ನ ಡಿಕೆ ಶಿವಕುಮಾರ್ ರಾಜ್ಯದ ಹಿರಿಯ ಮೂವರು ಸಿಎಂಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಬಂದಿದ್ದರು. ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಯಡಿಯೂರಪ್ಪ, ಮಾಜಿ ಪ್ರಧಾನಿ ದೇವೇಗೌಡರ ಮನೆಗೆ ಖುದ್ದು ಭೇಟಿ ಮಾಡಿದ್ದರು.

ಇದು ಇಷ್ಟಕ್ಕೇ ನಿಂತಿಲ್ಲ. ಡಿಕೆ ಶಿವಕುಮಾರ್ ನಿನ್ನೆ ಮಾಜಿ ಸಿಎಂ ಡಿವಿ ಸದಾನಂದ ಗೌಡ, ಜಗದೀಶ್ ಶೆಟ್ಟರ್ ಮನೆಗೂ ಭೇಟಿ ನೀಡಿದ್ದಾರೆ. ಈ ಮೂಲಕ ಈ ಮೊದಲೇ ಹೇಳಿದಂತೆ ಇನ್ನಷ್ಟು ಮಾಜಿ ಸಿಎಂಗಳ ಮನೆಗೆ ಭೇಟಿ ನೀಡಿ ಸಹಕಾರ ಕೋರಿದ್ದಾರೆ. ವಿಪಕ್ಷಗಳ ನಾಯಕರ ಮನೆಗೂ ಸೌಹಾರ್ದಯುತ ಭೇಟಿ ನೀಡುವ ಮೂಲಕ ಡಿಕೆ ಶಿವಕುಮಾರ್ ತಾವು ಎಲ್ಲರಿಗಿಂತ ಡಿಫರೆಂಟ್ ಎಂದು ಸಾಬೀತುಪಡಿಸುತ್ತಿದ್ದಾರೆ.

ಡಿಕೆಶಿ ವೇಗ ನೋಡಿದರೆ ಸ್ವಪಕ್ಷೀಯರಿಗೇ ಆತಂಕವಾಗಬಹುದು. ರಾಜಕೀಯದಲ್ಲಿ ಈ ರೀತಿ ಎದುರಾಳಿ ಪಕ್ಷದ ನಾಯಕರ ಮನೆಗೆ ಹೋಗಿ ಸೌಹಾರ್ದಯುತ ವರ್ತನೆ ತೋರುವುದು ಇತ್ತೀಚೆಗಿನ ದಿನಗಳಲ್ಲಿ ಅಪರೂಪವಾಗಿದೆ. ಇದರ ಹಿಂದಿನ ರಾಜಕೀಯ ಲೆಕ್ಕಾಚಾರಗಳು ಏನೇ ಇರಲಿ. ಆದರೆ ಡಿಕೆಶಿ ಈ ನಡೆ ಜನರ ಮನಸ್ಸಿಗೂ ಅಚ್ಚರಿಯುಂಟು ಮಾಡುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಬಿಜೆಪಿ ನಾಯಕರು

ಮುಸ್ಲಿಮರೇ ಫಸ್ಟ್ ಎಂದಿದ್ದ ಅರವಿಂದ ಬೋಳಾರ್ ಈಗ ಕೈ ಮುಗಿದು ಹೀಗೆ ಬೇಡಿಕೊಂಡ್ರು

ದೇಶಸೇವೆಗೆ ಸಮರ್ಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೀ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಏಯ್ ನೀನೂ ಸ್ವಲ್ಪ ತಿನ್ನೋ… ನಂದಿ ತಿನ್ನಲಿಲ್ಲವೆಂದು ಕೋತಿ ಏನು ಮಾಡ್ತು ನೋಡಿ Video

ಮುಂದಿನ ಸುದ್ದಿ
Show comments