ಬೆಂಗಳೂರು: ಕಾಂಗ್ರೆಸ್ ಶಾಸಕರಿಗೆ ಇಂದು ವಿಶೇಷ ಔತಣಕೂಟ ಆಯೋಜಿಸಲಾಗಿದೆ. ಇದಕ್ಕೆ ಸ್ಪಾನ್ಸರ್ ಡಿಕೆ ಶಿವಕುಮಾರ್. ಕಾರಣವೇನು ಇಲ್ಲಿದೆ ಡೀಟೈಲ್ಸ್.
ಕಾಂಗ್ರೆಸ್ ಶಾಸಕರು ಈ ಹಿಂದೆ ಸಿಎಂ ಬದಲಾವಣೆ ವಿಚಾರವಾಗಿ ಡಿನ್ನರ್ ಕೂಟ ಆಯೋಜಿಸಿ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ ಈಗ ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಎಲ್ಲಾ ನಾಯಕರಿಗೂ ಔತಣ ಕೂಟ ನೀಡಲಿದ್ದಾರೆ.
ಇದಕ್ಕೆ ಕಾರಣವೂ ಇದೆ. ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಐದು ವರ್ಷ ಪೂರೈಸುತ್ತಿದ್ದಾರೆ. ಈ ಕಾರಣಕ್ಕೇ ಎಲ್ಲಾ ನಾಯಕರಿಗೂ ಔತಣ ಕೂಟ ನೀಡಲು ಮುಂದಾಗಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಇಂದು ಔತಣ ಕೂಟ ನಡೆಯಲಿದೆ.
ಒಂದೆಡೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ತೆರೆಮರೆಯಲ್ಲಿ ಪ್ರಯತ್ನಗಳು ನಡೆಯುತ್ತಿವೆ. ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಭಿನ್ನಮತಗಳಿರುವಾಗಲೇ ಈ ಔತಣ ಕೂಟ ಆಯೋಜಿಸುವುದು ಮಹತ್ವ ಪಡೆದಿದೆ. ಅದರಲ್ಲೂ ನಿನ್ನೆ ಸದನದಲ್ಲೇ ನಾನೇ ಪೂರ್ಣಾವಧಿಗೂ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಘೋಷಿಸಿದ ಬೆನ್ನಲ್ಲೇ ಡಿಕೆ ಶಿವಕುಮಾರ್ ಇಂದು ಔತಣ ಕೂಟ ಪಡೆದಿರುವುದು ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ.