Webdunia - Bharat's app for daily news and videos

Install App

ಡಿಕೆ ಶಿವಕುಮಾರ್ ಪ್ರಮಾಣ ವಚನ ದಿನ ಫಿಕ್ಸ್: ಈ ದಿನಕ್ಕಿದೆ ವಿಶೇಷ

ಕೃಷ್ಣವೇಣಿ ಕೆ
ಶನಿವಾರ, 30 ಮೇ 2026 (10:41 IST)
ಬೆಂಗಳೂರು: ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಲು ದಿನಾಂಕ ಫಿಕ್ಸ್ ಆಗಿದೆ. ಈ ದಿನಕ್ಕೆ ವಿಶೇಷತೆಯಿದೆ.

ಹೈಕಮಾಂಡ್ ಸೂಚನೆ ಮೇರೆಗೆ ಸಿಎಂ ಸ್ಥಾನಕ್ಕೆ ಮೊನ್ನೆ ಸಿದ್ದರಾಮಯ್ಯ ರಾಜೀನಾಮೆ ಸೂಚಿಸಿದ್ದರು. ಇದಾದ ಬಳಿಕ ಹೊಸ ಕ್ಯಾಬಿನೆಟ್ ರಚನೆ ಸಲುವಾಗಿ ನಿನ್ನೆಯಿಡೀ ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಜೊತೆ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ನಾಯಕರು ಚರ್ಚೆ ನಡೆಸಿದ್ದರು.

ಡಿಕೆ ಶಿವಕುಮಾರ್ ಸಿಎಂ ಆಗುವುದು ಖಚಿತವಾಗಿದ್ದು ಇಂದು ಸಂಜೆ ಶಾಸಕಾಂಗ ಸಭೆಯಲ್ಲಿ ಅಧಿಕೃತ ಘೋಷಣೆಯಾಗಲಿದೆ. ಬುಧವಾರ ಸಂಜೆ 4 ಗಂಟೆ ಬಳಿಕ ಡಿಕೆ ಶಿವಕುಮಾರ್ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಬುಧವಾರ ಎನ್ನುವುದು ವಿಶೇಷ ದಿನವಾಗಿದೆ. ಡಿಕೆ ಶಿವಕುಮಾರ್ ಜ್ಯೋತಿಷ್ಯವನ್ನು ನಂಬುತ್ತಾರೆ. ತಮ್ಮ ಪ್ರಮಾಣ ವಚನಕ್ಕೆ ಸೂಕ್ತ ದಿನಾಂಕ ಸೂಚಿಸಿ ಎಂದು ತಮ್ಮ ಗುರು ದ್ವಾರಕಾನಾಥ್ ಗುರೂಜಿಯವರನ್ನು ಕೇಳಿಕೊಂಡಿದ್ದರು. ಅದರಂತೆ ಇದೀಗ ಬುಧವಾರ ವಿಶೇಷ ದಿನದಂದೇ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧವಾರ ಆಧ್ಯಾತ್ಮಿಕವಾಗಿ ಮತ್ತು ಧಾರ್ಮಿಕವಾಗಿ ಅತ್ಯಂತ ವಿಶೇಷ ಹಾಗೂ ಶಕ್ತಿಶಾಲಿಯಾದ ದಿನವಾಗಿದೆ. ಈ ದಿನ ಕೆಲವು ಅಪರೂಪದ ಗ್ರಹಗಳ ಸಂಯೋಜನೆ ಮತ್ತು ಹಬ್ಬಗಳ ಸಮ್ಮಿಲನವಾಗುತ್ತಿದೆ. ಈ ದಿನ ಯಾವುದೇ ಹೊಸ ಉದ್ಯೋಗ, ವ್ಯಾಪಾರ ಆರಂಭಿಸಲು ಅಥವಾ ಒಪ್ಪಂದಗಳಿಗೆ ಸಹಿ ಹಾಕಲು ಜ್ಯೋತಿಷ್ಯದ ಪ್ರಕಾರ ಅತ್ಯಂತ ಶ್ರೇಷ್ಠ ದಿನವಾಗಿದೆ. ಶಿವನಿಗೆ ಅತ್ಯಂತ ಪ್ರಿಯವಾದ ಕೃಷ್ಣ ಪಕ್ಷದ ಪ್ರದೋಷ ವ್ರತವೂ ಕೂಡ ಇದೇ ದಿನದಂದು ಯೋಗವಾಗುತ್ತಿದೆ. ಹೀಗಾಗಿ ಈ ವಿಶೇಷ ದಿನದಂದೇ ಡಿಕೆಶಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾರೀ ಮಳೆಯ ಮುನ್ಸೂಚನೆ: ಜಿಯಾಂಗ್ಸಿಯಲ್ಲಿ ಚೀನಾ ಪ್ರವಾಹ ಎಚ್ಚರಿಕೆ

ವಿವಾದಿತ ಪಾರ್ಕ್ ತಿದ್ದುಪಡಿ ಮಸೂದೆ ವಾಪಾಸ್‌: ಹೋರಾಟಕ್ಕೆ ಸಿಕ್ಕ ಜಯ ಎಂದ ವಿಜಯೇಂದ್ರ

ಭಾರತದ ಆರ್ಥಿಕ ಬೆಳವಣಿಗೆ ಜಗತ್ತಿಗೆ ವಿಶ್ವಾಸದ ಮೂಲ: ಪ್ರಧಾನಿ ಮೋದಿ

ಸಮೀಕ್ಷೆಯಲ್ಲಿ ಅಡಚಣೆ, ಗೃಹಜ್ಯೋತಿ ಪರಿಶೀಲನಾ ಗಡುವು ಸೆಪ್ಟೆಂಬರ್ ಅಂತ್ಯದವರೆಗೆ ವಿಸ್ತರಣೆ

ಕರ್ತವ್ಯದಲ್ಲಿದ್ದ ಪಿಎಸ್‌ಐಗೆ ಕಪಾಳಮೋಕ್ಷ, ಎಂಎಲ್‌ಎ ಸುರೇಶ್ ಪುತ್ರಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ

ಮುಂದಿನ ಸುದ್ದಿ
Show comments