Publish Date: Fri, 29 May 2026 (15:58 IST)
Updated Date: Fri, 29 May 2026 (16:00 IST)
ಬೆಂಗಳೂರು: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದಾರೆ. ಇದೀಗ ಡಿಕೆ ಶಿವಕುಮಾರ್ ಗೆ ಸಿಎಂ ಆಗುವ ಅದೃಷ್ಟ ಕೊನೆಗೂ ಒಲಿದುಬಂದಿದೆ. ಅಷ್ಟಕ್ಕೂ ಡಿಕೆ ಶಿವಕುಮಾರ್ ಗೆ ಅದೃಷ್ಟ ಬರಲು ಕಾರಣ ಇವಳೇ ಅಂತಿದ್ದಾರೆ ಪಬ್ಲಿಕ್.
ಡಿಕೆ ಶಿವಕುಮಾರ್ ಸಿಎಂ ಪಟ್ಟದ ಕನಸು ಹಲವು ವರ್ಷಗಳದ್ದು. ರಾಜಕೀಯದಲ್ಲಿ ಬಂಡೆ ಎಂದೇ ಪರಿಗಣಿಸಲ್ಪಡುವ ಡಿಕೆಶಿ ಮನಸ್ಸು ಮಾಡಿದ್ದರೆ ಈ ಬಾರಿ ಚುನಾವಣೆ ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೇ ಸಿಎಂ ಆಗಬಹುದಿತ್ತು. ಹೈಕಮಾಂಡ್ ಮಾತಿಗೆ ಬೆಲೆ ಕೊಟ್ಟು ಸಿದ್ದರಾಮಯ್ಯನವರಿಗೇ ಸಿಎಂ ಆಗುವ ಅವಕಾಶ ಬಿಟ್ಟುಕೊಟ್ಟರು.
ಬಳಿಕ ಅರ್ಧ ಅವಧಿಯ ನಂತರ ಡಿಕೆ ಶಿವಕುಮಾರ್ ಗೆ ಸಿಎಂ ಪಟ್ಟದ ಒಪ್ಪಂದವಾಗಿತ್ತು ಎನ್ನಲಾಗಿತ್ತು. ಆದರೆ ಡಿಕೆ ಶಿವಕುಮಾರ್ ಗೆ ಅಷ್ಟು ಬೇಗ ಸಿಎಂ ಪಟ್ಟ ಸಿಗಲಿಲ್ಲ. ಇದಕ್ಕಾಗಿ ಅವರು ಸಾಕಷ್ಟು ಲಾಬಿ ನಡೆಸಬೇಕಾಗಿ ಬಂತು. ಇದರ ನಡುವೆ ಸಿದ್ದರಾಮಯ್ಯ ಕೂಡಾ ಅಷ್ಟು ಸುಲಭವಾಗಿ ಸಿಎಂ ಪಟ್ಟ ಬಿಟ್ಟುಕೊಡುವ ಲಕ್ಷಣ ಇರಲಿಲ್ಲ. ಹೀಗಾಗಿ ಡಿಕೆಶಿ ಈ ಅವಧಿಯಲ್ಲಿ ಸಿಎಮ ಸ್ಥಾನ ಸಿಗುವುದು ಕಷ್ಟ ಎಂದೇ ಎಲ್ಲರೂ ಅಂದುಕೊಂಡಿದ್ದರು.
ಆದರೆ ಎಲ್ಲಾ ಲೆಕ್ಕಾಚಾರ ಮೀರಿ ಈಗ ಸಿಎಂ ಆಗುತ್ತಿದ್ದಾರೆ. ಡಿಕೆಶಿ ಸಿಎಂ ಆಗುವುದಕ್ಕೆ ಎಷ್ಟೋ ದೇವಸ್ಥಾನಗಳಿಗೆ ಹೋಗಿ ಪೂಜೆ ಮಾಡಿಸಿದ್ದಾರೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಈಗ ಅವರಿಗೆ ಸಿಎಂ ಪಟ್ಟದ ಅದೃಷ್ಟ ತಂದಿದ್ದು ಮೊಮ್ಮಗಳೇ ಎನ್ನುತ್ತಿದ್ದಾರೆ.
ಡಿಕೆ ಶಿವಕುಮಾರ್ ರಾಜಕೀಯ ಗುರು ಎಸ್ಎಂ ಕೃಷ್ಣ ಅವರ ಜನ್ಮದಿನದಂದೇ ಮೊಮ್ಮಗಳು ಜನಿಸಿದ್ದಳು. ಮೊಮ್ಮಗಳು ಜನಿಸಿ ಒಂದು ತಿಂಗಳೂ ಆಗಿಲ್ಲ. ಆಗಲೇ ಡಿಕೆಶಿ ಸಿಎಂ ಆಗುತ್ತಿದ್ದಾರೆ. ಇದೆಲ್ಲಾ ಮೊಮ್ಮಗಳ ಕಾಲ್ಗುಣ ಎಂದು ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಅಭಿಪ್ರಾಯಪಟ್ಟಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ