Publish Date: Thu, 03 Aug 2017 (09:17 IST)
Updated Date: Thu, 03 Aug 2017 (09:19 IST)
ಬೆಂಗಳೂರು: ಸಚಿವ ಡಿಕೆ ಶಿವಕುಮಾರ್ ನಿವಾಸದಲ್ಲಿ ಮೊಕ್ಕಾಂ ಹೂಡಿರುವ ಐಟಿ ಅಧಿಕಾರಿಗಳು ರಹಸ್ಯ ಲಾಕರ್ ಗಳನ್ನು ತೆರೆಯಲು ಹರಸಾಹಸ ನಡೆಸುತ್ತಿದ್ದಾರೆ. ಆದರೆ ಡಿಕೆಶಿ ಕೋಡ್ ವರ್ಡ್ ಹೇಳದೇ ಸತಾಯಿಸುತ್ತಿದ್ದಾರೆ ಎನ್ನಲಾಗಿದೆ.
ಪವರ್ ಮಿನಸ್ಟರ್ ಮನೆಯಲ್ಲಿ ಐಟಿ ಅಧಿಕಾರಿಗಳಿಗೆ ನಾಲ್ಕು ಸೀಕ್ರೆಟ್ ಲಾಕರ್ ಪತ್ತೆಯಾಗಿತ್ತು. ಆದರೆ ಈ ಪೈಕಿ ಮೂರು ಲಾಕರ್ ಗಳನ್ನು ತೆರೆಯಬೇಕಿದೆ. ಇದನ್ನು ತೆರೆಯಬೇಕೆಂದರೆ ರಹಸ್ಯ ಪಾಸ್ ವರ್ಡ್ ಬೇಕು. ಆದರೆ ಪಾಸ್ ವರ್ಡ್ ಗೊತ್ತಿರುವುದು ಡಿಕೆಶಿಗೆ ಮಾತ್ರ. ಆದರೆ ಸಚಿವರು ಮಾತ್ರ ಪಾಸ್ ವರ್ಡ್ ನೀಡದೇ ಸತಾಯಿಸುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಈ ಲಾಕರ್ ಗಳನ್ನು ತೆರೆದರೆ ಮತ್ತಷ್ಟು ದಾಖಲೆಗಳ ಸಂಗ್ರಹ ಸಿಗಬಹುದೆಂದು ಲೆಕ್ಕಾಚಾರ ಹಾಕಲಾಗಿದೆ. ರಾತ್ರಿಯೂ ಡಿಕೆಶಿ ನಿವಾಸದಲ್ಲೇ ಮೊಕ್ಕಾಂ ಹೂಡಿದ್ದ ಅಧಿಕಾರಿಗಳು ಅಲ್ಲಿಗೇ ತಿಂಡಿ ತರಿಸಿಕೊಂಡು ಉಪಾಹಾರ ಸೇವಿಸಿ ಮತ್ತೆ ತಮ್ಮ ಕೆಲಸ ಮುಂದುವರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ