DK Shivakumar: ಆರ್ ಸಿಬಿ ಟೀಂ ಖರೀದಿ ಮಾಡಕ್ಕೆ ನಂಗೇನು ಹುಚ್ಚಾ video

Sampriya
ಬುಧವಾರ, 11 ಜೂನ್ 2025 (18:01 IST)
ನವದೆಹಲಿ: ಡಿಸಿಎಂ ಡಿಕೆ ಶಿವಕುಮಾರ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಖರೀದಿಸುವ ವದಂತಿಗಳು ಈಚೆಗೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ಹರಿದಾಟಿತ್ತು. ಇದೀಗ ಈ ಸಂಬಂಧ ಶಿವಕುಮಾರ್‌ ಪ್ರತಿಕ್ರಿಯಿಸಿ, ಅಂತಹ ವಿಷಯಗಳಿಗೆ ನನಗೆ ಸಮಯವೂ ಇಲ್ಲ, ಸಾಧ್ಯತೆಯೂ ಇಲ್ಲ ಎನ್ನುವ ಮೂಲಕ ವದಂತಿಗೆ ಅಂತ್ಯ ಹಾಡಿದರು. 

ನೇರ ಮಾತಿನ ಮೂಲಕವೇ ಗುರುತಿಸಿಕೊಂಡಿರುವ ಡಿಕೆ ಶಿವಕುಮಾರ್ ಅವರು ಈ ವದಂತಿ ಬಗ್ಗೆ ಪ್ರತಿಕ್ರಿಯಿಸುತ್ತಾ, ನಾನು ರಾಯಲ್ ಚಾಲೆಂಜ್ ಕೂಡ ಕುಡಿಯುವುದಿಲ್ಲ ಎನ್ನುವ ಮೂಲಕ ಹಾಸ್ಯ ಚಾಟಕಿ ಬೀರಿದರು. 

"ನಾನು ಹುಚ್ಚನಲ್ಲ. ನಾನು ನನ್ನ ಚಿಕ್ಕ ವಯಸ್ಸಿನಿಂದಲೂ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್‌ನ ಸದಸ್ಯ, ಅಷ್ಟೇ. ನನಗೆ ಸಮಯವಿಲ್ಲ, ಆದರೂ ನನಗೆ ನಿರ್ವಹಣೆಯ ಭಾಗವಾಗಲು ಆಫರ್‌ಗಳು ಬಂದವು... ನನಗೆ ಆರ್‌ಸಿಬಿ ಏಕೆ ಬೇಕು? ನಾನು ರಾಯಲ್ ಚಾಲೆಂಜ್ ಕುಡಿಯುವುದಿಲ್ಲ" ಎಂದು ಶಿವಕುಮಾರ್ ಸುದ್ದಿ ಸಂಸ್ಥೆ ANI ಗೆ ತಿಳಿಸಿದರು.

ಯುಕೆ ಮೂಲದ ಡಯಾಜಿಯೊ ಪಿಎಲ್‌ಸಿ ತನ್ನ ಭಾರತೀಯ ಘಟಕದ ಮೂಲಕ ಆರ್‌ಸಿಬಿಯನ್ನು ಹೊಂದಿದ್ದು, ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಆರ್‌ಸಿಬಿಯನ್ನು ಮಾರಾಟ ಮಾಡುವ ಕುರಿತು ಸಂಭಾವ್ಯ ಸಲಹೆಗಾರರೊಂದಿಗೆ ಚರ್ಚೆ ನಡೆಸುತ್ತಿದೆ ಮತ್ತು $2 ಬಿಲಿಯನ್ ಮೌಲ್ಯವನ್ನು ಪಡೆಯಬಹುದು ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದ ಕೆಲವು ದಿನಗಳ ನಂತರ ಈ ಸ್ಪಷ್ಟೀಕರಣ ಬಂದಿದೆ.

ಊಹಾಪೋಹಗಳ ಹಿನ್ನೆಲೆಯಲ್ಲಿ, ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (ಬಿಎಸ್‌ಇ) ನಲ್ಲಿ ನೋಂದಾಯಿಸಲಾದ ಯುನೈಟೆಡ್ ಸ್ಪಿರಿಟ್ಸ್‌ನ ಷೇರುಗಳ ಬೆಲೆ ಶೇ. 3.3 ರಷ್ಟು ಏರಿಕೆಯಾಗಿ ಮಂಗಳವಾರ ಐದು ತಿಂಗಳ ಗರಿಷ್ಠ ಮಟ್ಟವನ್ನು ತಲುಪಿತು. ಇದು ಬಿಎಸ್‌ಇ ಡಯಾಜಿಯೊದಿಂದ ಸ್ಪಷ್ಟೀಕರಣವನ್ನು ಕೇಳಲು ಕಾರಣವಾಯಿತು, ನಂತರ ವರದಿಗಳು ಸುಳ್ಳು ಮತ್ತು ಸಂಪೂರ್ಣವಾಗಿ ಊಹಾತ್ಮಕ ಎಂದು ಹೇಳುವ ಮೂಲಕ ಅದು ಪ್ರತಿಕ್ರಿಯಿಸಿತು.<>
 
 
 
 
 
 
 
 
 
 
 
 
 
 
 

A post shared by Keerthik Updates (@keerthik_updates)

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕ್ಯಾಬಿನ್ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ, ಪೈಲಟ್ ವಿರುದ್ಧ ಪ್ರಕರಣ ದಾಖಲು

ದಕ್ಷಿಣ ಕನ್ನಡ ಜಿಲ್ಲೆಗೆ ಶೀಘ್ರದಲ್ಲೇ ಆನೆ ಕಾರ್ಯಪಡೆ

ಕೇರಳದ ಈ ಜಿಲ್ಲೆಗಳಲ್ಲಿ ಮುಂದಿನ 5 ದಿನಗಳಲ್ಲಿ ಭಾರೀ ಮಳೆ

ಧರ್ಮಸ್ಥಳ ಬುರುಡೆ ಪ್ರಕರಣ ಪ್ರಮುಖ ಹಂತದಲ್ಲಿರುವಾಗ ಮಹತ್ವದ ಬೆಳವಣಿಗೆ

ದೇವರಿಗೆ ಬಿಟ್ಟಿದ್ದ ಗೋವಿನ ಕಾಲು ಕಡಿದ ಪಾಪಿಗಳು, ಕ್ರಮಕ್ಕೆ ಒತ್ತಾಯ

ಮುಂದಿನ ಸುದ್ದಿ
Show comments