ಬೆಂಗಳೂರು: ಕಾಂಗ್ರೆಸ್ ನಲ್ಲಿ ಒಂದೆಡೆ ಸಿಎಂ ಕುರ್ಚಿಗಾಗಿ ಪೈಪೋಟಿ ನಡೆಯುತ್ತಿದ್ದರೆ ಇತ್ತ ಡಿಸಿಎಂ ಡಿಕೆ ಶಿವಕುಮಾರ್ ಕುಂಭಕೋಣಂನ ಪ್ರತ್ಯಂಗಿರಾ ದೇವಿಯ ದರ್ಶನ ಪಡೆದಿದ್ದಾರೆ. ಈ ಪವರ್ ಫುಲ್ ದೇವಿಯ ವಿಶೇಷತೆಯೇನು ನೋಡಿ.
ರಾಜ್ಯ ರಾಜಕೀಯದಲ್ಲಿ ಈಗ ಡಿನ್ನರ್ ಪಾರ್ಟಿ ಚರ್ಚೆಗಳು ಜೋರಾಗುತ್ತಿದ್ದರೆ ಇತ್ತ ಡಿಸಿಎಂ ಡಿಕೆ ಶಿವಕುಮಾರ್ ತಮ್ಮ ಕುಟುಂಬ ಸಮೇತ ಇಂದು ಕುಂಭಕೋಣಂನ ಪ್ರತ್ಯಂಗಿರಾ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಕುಂಭಕೋಣಂನ ಅಯ್ಯಾವುಡಿಯಲ್ಲಿರುವ ಪ್ರತ್ಯಂಗಿರಾ ದೇವಿ ದೇವಾಲಯ ಅತ್ಯಂತ ಪ್ರಾಚೀನಾ ದೇವಾಲಯವಾಗಿದೆ. ಉಗ್ರಸ್ವರೂಪಿಣಿ ದೇವಿಯ ರೂಪವಾಗಿದ್ದು, ಇಲ್ಲಿ ಪೂಜೆ ಸಲ್ಲಿಸಿದರೆ ಶತ್ರು ಸಂಹಾರವಾಗುತ್ತದೆ ಎಂಬ ನಂಬಿಕೆಯಿದೆ. ಹೀಗಾಗಿ ಈಗ ಡಿಕೆಶಿಗೆ ರಾಜಕೀಯ ವಲಯದಲ್ಲಿ ಶತ್ರುಗಳು ಯಾರು, ಯಾವುದರ ಸಂಹಾರಕ್ಕಾಗಿ ಅವರು ಇಲ್ಲಿ ಬಂದು ಪೂಜೆ ಸಲ್ಲಿಸಿದ್ದಾರೆ ಎಂಬ ಪ್ರಶ್ನೆ ಮೂಡಿದೆ.
ಪ್ರತ್ಯಂಗಿರಾ ದೇವಿಗೆ ಹೋಮ, ಪೂಜೆ ಮಾಡುವುದು ಅತ್ಯಂತ ವಿಶೇಷವಾಗಿದೆ. ಇದರಿಂದ ನಕಾರಾತ್ಮಕ ಶಕ್ತಿಗಳು, ನಮ್ಮ ಮೇಲಿರುವ ಕೆಟ್ಟ ದೃಷ್ಟಿ, ದುಷ್ಟ ಶಕ್ತಿಗಳು ನಮಗೆ ತೊಂದರೆ ನೀಡದಂತೆ ಕಾಪಾಡಿಕೊಳ್ಳಲು ದೇವಿ ಅನುಗ್ರಹಿಸುತ್ತಾಳೆ ಎಂಬ ನಂಬಿಕೆಯಿದೆ. ಸಾಮಾನ್ಯವಾಗಿ ರಾಜಕಾರಣಿಗಳು ಉನ್ನತ ಹುದ್ದೆಗೇರುವ ಮಹತ್ವಾಕಾಂಕ್ಷೆಯಿಂದ ಪ್ರತ್ಯಂಗಿರಾ ದೇವಿ ಪೂಜೆ ಮಾಡುತ್ತಾರೆ. ಇದೀಗ ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಡಿಕೆಶಿ ಪೂಜೆ ನಡೆಸಿರುವುದು ವಿಶೇಷ ಮಹತ್ವ ಪಡೆದಿದೆ.