ಆರ್ ಎಸ್ಎಸ್ ಗೀತೆ ಹಾಡಿದ್ದಕ್ಕೆ ಕ್ಷಮೆ ಯಾಚಿಸಿದ ಡಿಕೆ ಶಿವಕುಮಾರ್

Krishnaveni K
ಮಂಗಳವಾರ, 26 ಆಗಸ್ಟ್ 2025 (12:26 IST)

ಬೆಂಗಳೂರು: ವಿಧಾನಸಭೆ ಅಧಿವೇಶನದಲ್ಲಿ ವಿಪಕ್ಷಗಳು ಕಿಚಾಯಿಸಲು ಆರ್ ಎಸ್ಎಸ್ ಧ್ಯೇಯ ಗೀತೆ ಹಾಡಿದ್ದ ಡಿಕೆ ಶಿವಕುಮಾರ್ ಈಗ ಸ್ವಪಕ್ಷೀಯರಿಂದ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಕ್ಷಮೆ ಯಾಚಿಸಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್ ಮೊನ್ನೆಯಷ್ಟೇ ವಿಪಕ್ಷ ನಾಯಕ ಆರ್ ಅಶೋಕ್ ಗೆ ಟಾಂಗ್ ಕೊಡಲು ಆರ್ ಎಸ್ಎಸ್ ಧ್ಯೇಯ ಗೀತೆ ‘ನಮಸ್ತೇ ಸದಾ ವತ್ಸಲೇ’ ಹಾಡನ್ನು ಹಾಡಿದ್ದರು. ಡಿಕೆಶಿ ಅಧಿವೇಶನದಲ್ಲಿ ಆರ್ ಎಸ್ಎಸ್ ಹಾಡು ಹಾಡಿದ್ದು ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು.

ಇದಕ್ಕಾಗಿ ಅವರು ಕ್ಷಮೆ ಯಾಚಿಸಬೇಕು ಎಂದು ನಿನ್ನೆಯಷ್ಟೇ ಕಾಂಗ್ರೆಸ್ ಹಿರಿಯ ನಾಯಕ, ಎಂಎಲ್ ಸಿ ಬಿಕೆ ಹರಿಪ್ರಸಾದ್ ಆಗ್ರಹಿಸಿದ್ದರು. ಅವರು ಏನು ಹೇಳಿದ್ರೂ ನಡೆಯುತ್ತದೆ ಎಂದು ಮೊನ್ನೆಯಷ್ಟೇ ಸಚಿವ ಸ್ಥಾನದಿಂದ ಪದಚ್ಯುತಿಗೊಂಡಿದ್ದ ಕೆಎನ್ ರಾಜಣ್ಣ ಟಾಂಗ್ ಕೊಟ್ಟಿದ್ದರು.

ಇದರ ನಡುವೆಯೇ ಇಂದು ಡಿಕೆಶಿ ತಮ್ಮ ಹಾಡಿಗೆ ಕ್ಷಮೆ ಯಾಚಿಸಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ. ಒಂದು ವೇಳೆ ನಾನು ಮಾಡಿದ್ದು ತಪ್ಪು ಎಂದು ನೀವು ಭಾವಿಸುವುದಾದರೆ ಎಲ್ಲಾ ಕಾಂಗ್ರೆಸ್ ನಾಯಕರ, ಕಾರ್ಯಕರ್ತರ ಮತ್ತು ಇಂಡಿಯಾ ಒಕ್ಕೂಟದ ಕ್ಷಮೆ ಯಾಚಿಸುತ್ತೇನೆ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಂಜಾಬ್ ನಲ್ಲೇ 500 ಕೋಟಿ, ನಮ್ಮಲ್ಲಿ ಕಾಂಗ್ರೆಸ್ಸಿಗರು ಹೈಕಮಾಂಡ್ ಗೆ ಎಷ್ಟು ಕೊಡ್ತಾರೋ: ಆರ್ ಅಶೋಕ್

ನಿರ್ಮಲಾ ಸೀತಾರಾಮನ್ ಎಂತವ್ಳು ಅವ್ಳು ಎಂದ ಸಿದ್ದರಾಮಯ್ಯ: ವಿಡಿಯೋ

ಹೆಚ್ಚು ಮಕ್ಕಳ ಮಾಡಿಕೊಳ್ಬೇಡಿ, ಅಂತರ್ಜಾತಿ ವಿವಾಹವಾಗಿ ಎಂದ ಸಿದ್ದರಾಮಯ್ಯ

ಅಧಿಕಾರ ಹಂಚಿಕೆ ಬಗ್ಗೆ ಸೋನಿಯಾ ಗಾಂಧಿಯಿಂದಲೇ ಬಂತು ಮಹತ್ವದ ಸಂದೇಶ

ಕುಸ್ತಿ ಕದನ ತಣ್ಣಗಾಗುತ್ತಲೇ ಸಿದ್ದರಾಮಯ್ಯಗೆ ಎದುರಾಗಿದೆ ಮತ್ತೊಂದು ಪರೀಕ್ಷೆ

ಮುಂದಿನ ಸುದ್ದಿ
Show comments