Publish Date: Thu, 30 Aug 2018 (18:01 IST)
Updated Date: Thu, 30 Aug 2018 (18:04 IST)
ಹಾವೇರಿ ಜಿಲ್ಲೆಯ ಸ್ಥಳೀಯ ಸಂಸ್ಥೆಯ ಚುನಾವಣೆಗೆ ಜಿಲ್ಲಾಡಳಿತ ಸಿದ್ದಗೊಂಡಿದೆ. ಜಿಲ್ಲೆಯ ಐದು ಸ್ಥಳೀಯ ಚುನಾವಣೆಗೆ ನಾಳೆ ಬೆಳಗ್ಗೆ ಮತದಾನ ನಡೆಯಲಿದ್ದು, ಮತದಾನಕ್ಕೆ ಸಕಲ ಸಿದ್ದತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಎಮ್. ವಿ. ವೆಂಕಟೇಶ ತಿಳಿಸಿದ್ದಾರೆ.
ಹಾವೇರಿ ರಾಣೇಬೆನ್ನೂರು ನಗರಸಭೆ ಹಾನಗಲ್ ಸವಣೂರು ಪುರಸಭೆ ಹಾಗೂ ಹಿರೆಕೇರೂರ ಪಟ್ಟಣದ ಪಂಚಾಯತಿಯ 136 ವಾರ್ಡಗಳಿಗೆ ನಾಳೆ ಮತದಾನ ನಡೆಯಲಿದೆ. ಒಟ್ಟು 2,05,199 ಮತದಾರರು ಮತ ಚಲಾಯಿಸಲಿದ್ದು, ಜಿಲ್ಲೆಯಾದ್ಯಂತ 481 ಅಭ್ಯರ್ಥಿಗಳಿದ್ದು ಅದರಲ್ಲಿ 172 ಮಹಿಳಾ ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಜಿಲ್ಲಾಡಳಿತ ಒಟ್ಟು 208 ಮತಗಟ್ಟೆಗಳನು ಸ್ಥಾಪಿಸಿದ್ದು 65 ಸೂಕ್ಷ್ಮ 25 ಮತಗಟ್ಟೆಗಳನ್ನು ಅತಿಸೂಕ್ಷ್ಮ ಮತಗಟ್ಟೆಗಳು ಅಂತಾ ಗುರುತಿಸಲಾಗಿದ್ದು 224 ಇವಿಎಂ ಮಿಶನ್ ಗಳನ್ನು ಬಳಸಿಕೊಳ್ಳಲಾಗುತ್ತಿದೆ.