Select Your Language

Notifications

webdunia
webdunia
webdunia
webdunia

391 ಜನರಿಗೆ ಉಚಿತ ಕನ್ನಡಕಗಳ ವಿತರಣೆ

391 ಜನರಿಗೆ ಉಚಿತ ಕನ್ನಡಕಗಳ ವಿತರಣೆ
bangalore , ಶುಕ್ರವಾರ, 29 ಏಪ್ರಿಲ್ 2022 (19:58 IST)
ಬೆಂಗಳೂರು.ಏ.29; ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೃಷ್ಣಾನಂದ ನಗರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮಹಾಲಕ್ಷ್ಮಿ ಎಜುಕೇಶನಲ್ ಟ್ರಸ್ಟ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಏಪ್ರಿಲ್‌ 24 ರಂದು ಹಮ್ಮಿಕೊಂಡಿದ್ದ  ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರದಲ್ಲಿ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆಗೆ  ಒಳಗಾಗಿದ್ದವರಿಗೆ ಇಂದು ಉಚಿತ ಕನ್ನಡಕಗಳನ್ನು ಸ್ಥಳೀಯ ಶಾಸಕರೂ ಆದ ಅಬಕಾರಿ ಸಚಿವ ಕೆ.ಗೋಪಾಲಯ್ಯ ವಿತರಿಸಿದರು.
 
ಈ ಸಂದರ್ಭದಲ್ಲಿ ಮಾತನಾಡಿದ ‌ಅವರು, ಕ್ಷೇತ್ರದ ವ್ಯಾಪ್ತಿಯ ಸರ್ವರ ಆರೋಗ್ಯ ಉತ್ತಮ ವಾಗಿರಬೇಕೆಂಬ ದೃಷ್ಟಿಯಿಂದ ನಿರಂತರವಾಗಿ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧಿ ವಿತರಣೆ ಮಾಡಲಾಗುತ್ತಿದೆ. ಇದರ ಮುಂದುವರಿದ ಭಾಗವಾಗಿ ಮೇ ಎರಡನೇ ಭಾನುವಾರ ನಂದಿನಿ ಬಡಾವಣೆಯ ರಾಮಕೃಷ್ಣ ನಗರದಲ್ಲಿರುವ ದೇವಸ್ಥಾನದ ಪ್ರಾರ್ಥನಾ ಮಂದಿರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದರು.
 
 ಆ ಭಾಗದ ಎಲ್ಲರೂ ಕೂಡ ಇದರ ಸದುಪಯೋಗ ಪಡೆದುಕೊಳ್ಳಬೇಕಲ್ಲದೆ ಬೇರೆ ಊರುಗಳಲ್ಲಿ ಇರುವ ನಿಮ್ಮ ಬಂಧುಗಳು ಕಣ್ಣು, ಹೃದಯ, ಗರ್ಭಕೋಶ ಮೊದಲಾದ ಸಮಸ್ಯೆಗಳಿಂದ ನರಳುತ್ತಿದ್ದರೆ ಅವರಿಗೂ ಈ ವಿಚಾರ ತಿಳಿಸಿ ಅವರ ಆರೋಗ್ಯ ಕೂಡ ಸುಧಾರಿಸುವ ನಿಟ್ಟಿನಲ್ಲಿ ಮುಂದಾಗಿ ಎಂದು ಕರೆ ನೀಡಿದರು.
 
ಕಾರ್ಯಕ್ರಮದಲ್ಲಿ 391 ಜನರಿಗೆ ಉಚಿತ ಕನ್ನಡಗಳನ್ನು ಸಚಿವರು ವಿತರಿಸಿದರು. ಈ ವೇಳೆ‌ ಬಿಬಿಎಂಪಿ ಮಾಜಿ ಸದಸ್ಯ ಮಹದೇವ್, ಪುಟ್ಟರಾಜು,ಬೆಂಗಳೂರು ಜಿಲ್ಲಾ ಬಿಜೆಪಿ ಘಟಕದ ಉಪಾಧ್ಯಕ್ಷ ಜಯರಾಮಯ್ಯ, ಡಾ.ನಾಗೇಂದ್ರ, ವೆಂಕಟೇಶ್ ಮೂರ್ತಿ,ವೆಂಕಟೇಶ್ ,ಸ್ಥಳೀಯ ಬಿಜೆಪಿ ಮುಖಂಡರು, ಉಪಸ್ಥಿತರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಶಾಲೆಗಳಲ್ಲಿ ಬೈಬಲ್ ಕಡ್ಡಾಯದ ಕುರಿತು ಪಾಲಕರು ಮಾಹಿತಿ ನೀಡಿ