Select Your Language

Notifications

webdunia
webdunia
webdunia
webdunia

24 ಗಂಟೆಯಲ್ಲಿ ಮೈತ್ರಿ ಸರ್ಕಾರ ಬೀಳಲಿದೆ ಎಂದ ಉಮೇಶ್ ಕತ್ತಿಗೆ ಸವಾಲೆಸೆದ ದಿನೇಶ್ ಗುಂಡೂರಾವ್

24 ಗಂಟೆಯಲ್ಲಿ ಮೈತ್ರಿ ಸರ್ಕಾರ ಬೀಳಲಿದೆ ಎಂದ ಉಮೇಶ್ ಕತ್ತಿಗೆ ಸವಾಲೆಸೆದ ದಿನೇಶ್ ಗುಂಡೂರಾವ್
ಬೆಳಗಾವಿ , ಗುರುವಾರ, 27 ಡಿಸೆಂಬರ್ 2018 (08:24 IST)
ಬೆಳಗಾವಿ : ಮುಂದಿನ 24 ಗಂಟೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಬಿದ್ದು ಹೋಗುತ್ತದೆ ಎಂದು ಹೇಳುವುದರ ಮೂಲಕ ಬಿಜೆಪಿ ಶಾಸಕ ಉಮೇಶ್ ಕತ್ತಿ ಅವರು ಹೊಸ ಬಾಂಬ್ ವೊಂದನ್ನು ಸ್ಪೋಟಿಸಿದ್ದಾರೆ.


ಸುದ್ದಿಗಾರರ ಜತೆ ಮಾತನಾಡಿದ ಉಮೇಶ್ ಕತ್ತಿ ಅವರು,’ ಇನ್ನು 24 ಗಂಟೆಯಲ್ಲಿ ಮೈತ್ರಿ ಸರ್ಕಾರ ಪತನಗೊಳ್ಳಲಿದೆ. ಇನ್ನೊಂದು ವಾರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾಗಲಿದೆ. ಮೈತ್ರಿ ಸರ್ಕಾರದ 15 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಆದರೆ ಈಗಲೇ ಅವರ ಹೆಸರನ್ನು ಬಹಿರಂಗಪಡಿಸುವುದಿಲ್ಲ’ ಎಂದು ಹೇಳುವುದರ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ.


ಇವರ ಈ ಹೇಳಿಕೆಗೆ ಸವಾಲೆಸೆದ ಕಾಂಗ್ರೆಸ್ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ‘24 ಗಂಟೆಯೊಳಗೆ ಮೈತ್ರಿ ಸರ್ಕಾರ ಬೀಳುತ್ತದೆ ಎಂದು ಹೇಳುತ್ತಿರುವ ಬಿಜೆಪಿ ಶಾಸಕ ಉಮೇಶ್ ಕತ್ತಿ ಅವರು ಮಾತು ಉಳಿಸಿಕೊಳ್ಳದಿದ್ದರೆ ರಾಜಿನಾಮೆ ಕೊಡ್ತಾರಾ’ ಎಂದು ಕೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಳ್ಳಾರಿ ಜಿಲ್ಲೆಗೆ ಸೇರ್ಪಡೆಯಾದ ಹರಪನಹಳ್ಳಿ