Webdunia - Bharat's app for daily news and videos

Install App

Dinesh gundu rao: ಲಾಕ್ ಡೌನ್ ಮಾಡೋದು ನಿಮಗಿಷ್ಟಾನಾ, ನಾಳೆನೇ ಅನೌನ್ಸ್ ಮಾಡ್ತೀನಿ

Krishnaveni K
ಸೋಮವಾರ, 26 ಮೇ 2025 (12:02 IST)
Photo Credit: X
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಲಾಕ್ ಡೌನ್ ಮಾಡೋದು ನಿಮಗೆ ಇಷ್ಟ ಅಂದ್ರೆ ಹೇಳಿ ನಾಳೆನೇ ಅನೌನ್ಸ್ ಮಾಡ್ತೀನಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ರಾಜ್ಯದಲ್ಲಿ ಈಗ ಮಹಾಮಾರಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಪತ್ರಕರ್ತರೊಬ್ಬರು ಈ ಹಿಂದೆ ಕೊರೋನಾ ಬಂದಾಗ ಸರ್ಕಾರ ನಿರ್ಲ್ಯಕ್ಷ ವಹಿಸಿದ್ದಕ್ಕೆ ಕೇಸ್ ಹೆಚ್ಚಾಯ್ತು. ಈಗ ಏನು ಕ್ರಮ ಕೈಗೊಳ್ಳುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ಉತ್ತರಿಸಿರುವ ದಿನೇಶ್ ಗುಂಡೂರಾವ್, ಸದ್ಯಕ್ಕೆ ಭಯ ಬೇಕಾಗಿಲ್ಲ. ನಾವು ನಿರ್ಲ್ಯಕ್ಷ ವಹಿಸಿಲ್ಲ. ನಾವು ಈಗಾಗಲೇ ಟೆಕ್ನಿಕಲ್ ಕಮಿಟಿ ಮೀಟಿಂಗ್ ಮಾಡಿದ್ದೀವಿ. ಎರಡು ದಿನದಲ್ಲಿ ಹೆಚ್ಚುವರಿ ಟೆಸ್ಟ್ ಕಿಟ್ ಗಳು ಆಸ್ಪತ್ರೆಗಳಿಗೆ ಬರಲಿದೆ. ಯಾವುದಕ್ಕೂ ಭಯ ಪಡಬೇಕಾಗಿಲ್ಲ. ನಾವು ಏನು ಕ್ರಮ ಕೈಗೊಳ್ಳಬಹುದೋ ಅದೆಲ್ಲವನ್ನೂ ಮಾಡ್ತಿದ್ದೀವಿ. ಇನ್ನು, ಲಾಕ್ ಡೌನ್ ಮಾಡೋದು ನಿಮಗೆ ಇಷ್ಟ ಅಂದ್ರೆ ಹೇಳಿ. ನಾಳೆನೇ ಅನೌನ್ಸ್ ಮಾಡ್ತೀನಿ ಎಂದಿದ್ದಾರೆ.

ಸದ್ಯಕ್ಕೆ ಕೊವಿಡ್ ಆತಂಕಕಾರಿಯಾಗಿಲ್ಲ. ರಾಜ್ಯದ ಯಾವುದೇ ಭಾಗದಲ್ಲಿ ಓಡಾಡುವುದಕ್ಕೆ ಯಾವುದೇ ನಿರ್ಬಂಧವಿಲ್ಲ. ನಮ್ಮ ಎಚ್ಚರಿಕೆಯಲ್ಲಿ ನಾವಿದ್ದರೆ ಸಾಕು. ಇದರ ಹೊರತಾಗಿ ವಿನಾಕಾರಣ ಭಯ ಬೇಡ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮತಗಳ್ಳತನ ಆರೋಪ ಹೊರಿಸಿದ ಕಾಂಗ್ರೆಸ್ ಗೆ ಸೋನಿಯಾ ಗಾಂಧಿ ದಾಖಲೆ ತೋರಿಸಿದ ಬಿಜೆಪಿ

17ರಂದು ಧರ್ಮಸ್ಥಳಕ್ಕೆ ಭೇಟಿ: ಬಿ.ವೈ.ವಿಜಯೇಂದ್ರ

Arecanut Price: ಅಡಿಕೆ, ಕೊಬ್ಬರಿ ಬೆಳೆಗಾರರಿಗೆ ನಿರಾಸೆ

ಬೀದಿ ನಾಯಿ ಪರ ಬ್ಯಾಟಿಂಗ್ ಮಾಡಿದ ರಾಹುಲ್ ಗಾಂಧಿಗೆ ರಾತ್ರಿ ಒಮ್ಮೆ ಗಲ್ಲಿಗೆ ಹೋಗಿ ನೋಡಿ ಎಂದ ಪಬ್ಲಿಕ್

ಹರ್ ಘರ್ ತಿರಂಗಾ ಇಂದಿನಿಂದ: ನೀವೂ ಭಾಗಿಯಾಗಿ ಎಂದು ಕರೆ ನೀಡಿದ ವಿಜಯೇಂದ್ರ

ಮುಂದಿನ ಸುದ್ದಿ
Show comments