Publish Date: Mon, 15 May 2023 (13:45 IST)
Updated Date: Mon, 15 May 2023 (13:55 IST)
ಸದಾಶಿವನಗರದಲ್ಲಿರುವ ಡಿಕೆಶಿವಕುಮಾರ್ ನಿವಾಸದ ಮುಂದೆ ಡಿಕೆಶಿವಕುಮಾರ್ ಹುಟ್ಟುಹಬ್ಬವನ್ನ ಅಭಿಮಾನಿಗಳು ಆಚರಿಸಿದ್ದಾರೆ.15 ಕೆಜಿ ತೂಕದ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಣೆ ಮಾಡಿದ್ದು, ಡಿಕೆಶಿ ಅಭಿಮಾನಿಗಳು ಡಿಕೆ ಶಿವಕುಮಾರ್ ಪರ ಘೋಷಣೆ ಕೂಗಿ ಸಂಭ್ರಮಿಸಿದ್ರು.
ಡಿಕೆಶಿವಕುಮಾರ್ ಹುಟ್ಟುಹಬ್ಬ ಹಿನ್ನಲೆ ಮನೆಯಿಂದ ಸುಮಾರು 65 ಕೆಜಿ ತೂಕದ ಕೇಕ್ ಶಾಂಗ್ರೀಲಾ ಹೊಟೇಲ್ ಗೆ ಹೊರಟ್ಟಿದೆ.ನಿವಾಸದಲ್ಲಿ ಕೇಕ್ ಕಟ್ಟಮಾಡಲು ಡಿಕೆಶಿ ನಿರಾಕರಿಸಿದ್ದು,ಡಿಕೆಶಿವಕುಮಾರ್ ಬೆಂಬಲಿಗರಿಗೆ ನಿರಾಸೆ ಉಂಟಾಗಿದೆ.ಶಾಂಗ್ರಿ-ಲಾ ಹೋಟೆಲ್ ನಲ್ಲಿ ಕೇಕ್ ಕಟ್ ಮಾಡುವುದಾಗಿ ಡಿಕೆಶಿ ತಿಳಿಸಿದ್ದು,ಮತ್ತೆ ಶಾಂಗ್ರಿ-ಲಾ ಹೋಟೆಲ್ ನತ್ತ ಡಿಕೆಶಿ ಬೆಂಬಲಿಗರಿಗರು ಕೇಕ್ ತೆಗೆದುಕೊಂಡು ಹೊರಟ್ಟಿದ್ದಾರೆ.