Select Your Language

Notifications

webdunia
webdunia
webdunia
webdunia

ಹುಬ್ಬಳ್ಳಿಯಲ್ಲಿ ಇದೆಂಥಾ ವಿಚಿತ್ರ ಆಚರಣೆ...?

ಹುಬ್ಬಳ್ಳಿಯಲ್ಲಿ ಇದೆಂಥಾ ವಿಚಿತ್ರ ಆಚರಣೆ...?
ಹುಬ್ಬಳ್ಳಿ , ಭಾನುವಾರ, 1 ಅಕ್ಟೋಬರ್ 2017 (13:34 IST)
ಹುಬ್ಬಳ್ಳಿ: ಬೆಂಕಿಯಲ್ಲಿ ಒಂದು ವರ್ಷದ ಮಗುವನ್ನು ಹಾಕಿ ತಗೆಯುವ ವಿಚಿತ್ರ ಸಂಪ್ರದಾಯ ಕುಂದಗೋಳ ತಾಲೂಕಿನ ಅಲ್ಲಾಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿ ಮೊಹರಂ ಹಬ್ಬದ ಆಚರಣೆಯ ಸಂದರ್ಭದಲ್ಲಿ ಮಕ್ಕಳಿಗೆ ರೋಗ ರುಜಿನಗಳು ಬಾರದಿರಲಿ ಎಂಬ ಉದ್ದೇಶದಿಂದ ಈ ಆಚರಣೆ ನಡೆಸಿಕೊಂಡು ಬರಲಾಗುತ್ತಿದೆ ಎನ್ನಲಾಗಿದೆ.  ಬೇರೆ ಬೇರೆ ಗ್ರಾಮಗಳಿಂದ ಬಂದವರು ಬೇಡಿಕೊಂಡ ಹರಕೆ ತೀರಿಸಲು ಈ ರೀತಿ ಮಕ್ಕಳನ್ನು ಬೆಂಕಿ ಮೇಲೆ ಮಲಗಿಸುತ್ತಾರೆ. 

ಕೆಂಡದ ಮೇಲೆ ಬಾಳೆ ಎಲೆ ಇಟ್ಟು ಮಕ್ಕಳನ್ನು ಮಲಗಿಸುತ್ತಾರೆ. ಎರಡು ನಿಮಿಷಗಳ ನಂತರ ಮಕ್ಕಳನ್ನು ತೆಗೆದುಕೊಂಡು ಹೋಗುತ್ತಾರೆ. ಇದರಿಂದ ಮಕ್ಕಳಿಗೆ ಯಾವುದೇ ದುಷ್ಟ ಶಕ್ತಿಗಳ ಕಾಟ ತಾಗುವುದಿಲ್ಲ ಎಂಬ ನಂಬಿಕೆ ಇವರಲ್ಲಿದೆ‌.‌ ಸಾಕಷ್ಟು ಜನ ತಮ್ಮ ಚಿಕ್ಕ ಚಿಕ್ಕ ಮಕ್ಕಳನ್ನು ಬೆಂಕಿ ಮೇಲೆ ಮಲಗಿಸುವ ದೃಶ್ಯ ಭಯಾನಕವಾಗಿತ್ತು.

ಇತ್ತ ಸಂಶಿ ಗ್ರಾಮದಲ್ಲಿ ಮೈನವಿರೇಳಿಸುವಂತೆ ಭಕ್ತರು ಭಕ್ತಿ ಸಮರ್ಪಣೆ ಮಾಡಿದ್ದಾರೆ. ರಾಜಾಬಕ್ಷಾ ಮಸುತಿ ಆವರಣದಲ್ಲಿ ವಿವಿಧ ಶಸ್ತ್ರಗಳನ್ನು ದೇಹಕ್ಕೆ ಸಿಕ್ಕಿಸಿಕೊಂಡು ಬೆಂಕಿಯೊಳಗೆ ಓಡಾಡುವ ದೃಶ್ಯ ಮೈ ಜುಮ್ ಎನಿಸುವಂತಿತ್ತು. ಕರಿಬಸಪ್ಪ ಜಾಡರ ಎನ್ನುವವರು ಮೈತುಂಬ ಶಸ್ತ್ರ ಚುಚ್ಚಿಕೊಂಡು, ಅದಕ್ಕೆ ನಿಂಬೆಹಣ್ಣನು ಚುಚ್ಚಿ ಗ್ರಾಮದಲ್ಲಿ ಸುತ್ತಾಡುವ ಮೂಲಕ  ತಮ್ಮ ಭಕ್ತಿ  ಸಲ್ಲಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

‘ಸೋನಿಯಾ ಗಾಂಧಿ ಇಲ್ಲಾಂದ್ರೆ ಕಾಂಗ್ರೆಸ್ ಬಾಗಿಲು ಬಂದ್’