Webdunia - Bharat's app for daily news and videos

Install App

ಧಾರವಾಡ: HSRP ನಂಬರ್ ಪ್ಲೇಟ್‌ಗೆ ಹೆಚ್ಚುವರಿ ಶುಲ್ಕ ವಿಧಿಸಿದ ಶೋರೂಂಗೆ ಶಾಕ್‌

Sampriya
ಸೋಮವಾರ, 17 ಫೆಬ್ರವರಿ 2025 (20:24 IST)
Photo Courtesy X
ಧಾರವಾಡ: ವಾಹನಕ್ಕೆ HSRP ನಂಬರ್ ಪ್ಲೇಟ್‌ ಅಳವಡಿಸುವ ಸಲುವಾಗಿ ಗ್ರಾಹಕರಿಗೆ ಹೆಚ್ಚುವರಿ ಶುಲ್ಕ ವಿಧಿಸಿದ ಫೋಕ್ಸ್‌ವ್ಯಾಗನ್ ಶೋರೂಮ್‌ಗೆ ಗ್ರಾಹಕ ನ್ಯಾಯಾಲಯ ಭರ್ಜರಿ ದಂಡ ವಿಧಿಸಿದೆ.

ದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಶ್ರೀ ಈಶಪ್ಪ ಕೆ. ಭೂತೆ ಮತ್ತು ಸದಸ್ಯರಾದ ವಿಶಾಲಾಕ್ಷಿ ಎ. ಬೋಳಶೆಟ್ಟಿ ಅವರಿದ್ದ ನ್ಯಾಯಪೀಠ ಈ ದಂಡ ವಿಧಿಸಿ ಆದೇಶ ಹೊರಡಿಸಿದೆ.

HSRP ನಂಬರ್ ಪ್ಲೇಟ್‌ ಅಳವಡಿಸುವ ಸಲುವಾಗಿ ಗ್ರಾಹಕರಿಂದ ₹200 ಶುಲ್ಕ ಪಡೆದುಕೊಂಡಿದ್ದರು.  ಇದರಿಂದ ಬಾಧಿತರಾಧ ಗ್ರಾಹಕ/ದೂರುದಾರರು ಧಾರವಾಡದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ಸಲ್ಲಿಸಿದ್ದರು.

ಈ ದೂರನ್ನು ವಿಚಾರಣೆಗೆ ಕೈಗೆತ್ತಿಕೊಂಡ ಆಯೋಗವು ದೂರನ್ನು ಪುರಸ್ಕರಿಸಿ ಆದೇಶ ಹೊರಡಿಸಿತು. ಗ್ರಾಹಕ/ ದೂರುದಾರರಿಗೆ ₹ 25,000 ಪರಿಹಾರವನ್ನು ನೀಡಿತು. ಜೊತೆಗೆ₹10,000 ಮೊಕದ್ದಮೆ ವೆಚ್ಚಗಳು ಮತ್ತು ನಂಬರ್‌ ಪ್ಲೇಟ್‌ಗೆ ಪಡೆಯಲಾಗಿದ್ದ ₹ 200 ಶೇಕಡಾ 10ರ ದಂಡನಾ ಬಡ್ಡಿ ಜೊತೆಗೆ ಮರುಪಾವತಿ ಮಾಡಬೇಕು ಎಂದು ಆದೇಶದಲ್ಲಿ ನಿರ್ದೇಶಿಸಲಾಗಿದೆ.

ಆದೇಶ ಹೊರಡಿಸಿದ 30 ದಿನದೊಳಗೆ ಪಾವತಿ ಮಾಡುವಂತೆ ಗ್ರಾಹಕರ ಆಯೋಗ ಶೋ ರೂಮ್‌ಗೆ ನಿರ್ದೇಶನ ನೀಡಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments