Webdunia - Bharat's app for daily news and videos

Install App

ಧರ್ಮಸ್ಥಳ ಬುರುಡೆ ರಹಸ್ಯ, ನಿರ್ಣಾಯಕ ಘಟ್ಟದಲ್ಲಿ ಕಾರ್ಮಿಕರ ಸಹಿ ಪಡೆದ ಎಸ್‌ಐಟಿ

Sampriya
ಶನಿವಾರ, 16 ಆಗಸ್ಟ್ 2025 (15:59 IST)
ಮಂಗಳೂರು: ಧರ್ಮಸ್ಥಳದ ಸುತ್ತಾಮುತ್ತಾ ಹತ್ತಾರು ಶವಗಳನ್ನು ಹೂತಿಟ್ಟ ಆರೋಪ ಸಂಬಂಧ ಕಳೇಬರಹ ಉತ್ಖನನಕ್ಕೆ ಸತ್ಯ ತಾತ್ಕಾಲಿಕ ಬ್ರೇಕ್ ಬಿದ್ದಿದೆ. 

ಮಾಸ್ಕ್‌ಮ್ಯಾನ್‌ ಗುರುತಿಸಿ 17 ಜಾಗದಲ್ಲಿ ಈಗಾಗಲೇ ಉತ್ಖನನ ಮುಗಿದ್ದು, ಅದರಲ್ಲಿ ಪಾಯಿಂಟ್ 6ರಲ್ಲಿ ಪುರುಷನ ಮೂಳೆ ಬಿಟ್ರೇ ಬೇರೆಲ್ಲೂ ಮೂಳೆ ಸಿಕ್ಕಿಲ್ಲ. 

ಇದೀಗ ಧರ್ಮಸ್ಥಳ, ಬೆಳ್ತಂಗಡಿ, ವೇಣೂರು ಜೊತೆ ಉತ್ತರ ಭಾರತದ ಕಾರ್ಮಿಕರು ಕಳೇಬರಹ ಹುಡುಕುವ ಕೆಲಸ ಮಾಡಿದ್ದರು. 17 ಜಾಗದಲ್ಲಿ ಗುಂಡಿ ತೆಗೆದ ಕಾರ್ಮಿಕರನ್ನು ಇಂದು ವಿಶೇಷ ತನಿಖಾ ತಂಡ ಬೆಳ್ತಂಗಡಿ ಠಾಣೆಗೆ ಕರೆಯಿಸಿಕೊಂಡಿತ್ತು.

ಇಂದು ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಭೆಯ ಬೆನ್ನಲ್ಲೇ ಎಸ್‌ಐಟಿ ಪೊಲೀಸರು ಎಲ್ಲಾ ಕಾರ್ಮಿಕರನ್ನು ಕರೆಸಿ ಸಹಿ ಪಡೆದುಕೊಂಡರು. ಮುಂದಿನ ದಿನಗಳಲ್ಲಿ ಅಗತ್ಯವಿದ್ದರೆ ಕರೆಸುತ್ತೇವೆ ಎಂದು ಹೇಳಿದ ಎಸ್‌ಐಟಿ ಪೊಲೀಸರು ಎಲ್ಲಾ ಕಾರ್ಮಿಕರಿಂದ ಸಹಿ ಪಡೆದು ವಾಪಾಸ್ ಕಳುಹಿಸಿದ್ದಾರೆ.

ಇನ್ನೂ ಧರ್ಮಸ್ಥಳದ ಸುತ್ತಾಮುತ್ತಾ ಹತ್ತಾರು ಶವಗಳನ್ನು ಹೂತಿಟ್ಟಿದ್ದೇನೆಂದು ದೂರು ನೀಡಿದ್ದ ಅನಾಮಿಕನನ್ನೇ  ಸುಮಾರು ನಾಲ್ಕೂವರೆ ಗಂಟೆಗಳ ಕಾಲ ವಿಚಾರಣೆ ನಡೆಸಿದ ಬಳಿಕ ಮಧ್ಯಾಹ್ನ 3 ಗಂಟೆಯ ವೇಳೆಗೆ ಆತನನ್ನು ಬಿಟ್ಟು ಕಳುಹಿಸಿದ್ದಾರೆ. ಸದ್ಯ ಸಾಕ್ಷಿದಾರ ವ್ಯಕ್ತಿ ಬೆಳ್ತಂಗಡಿಯ ಗೌಪ್ಯ ಸ್ಥಳದಲ್ಲಿ ವಾಸವಾಗಿದ್ದಾನೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾನು ದಲಿತ ವಿರೋಧಿಯಲ್ಲ, ತಪ್ಪಾಗಿದ್ದರೆ ಕ್ಷಮಿಸಿ ಎಂದ ಜಿಟಿ ದೇವೇಗೌಡ

ಬಿಜೆಪಿ ಮತಕಳ್ಳತನದಿಂದ ಅಧಿಕಾರ ಉಳಿಸಿಕೊಂಡಿದೆ: ಪ್ರಿಯಾಂಕಾ ಗಾಂಧಿ ಕಿಡಿ

ಮಹಾತ್ಮ ಗಾಂಧೀಜಿ ಮೇಲೂ ಆರ್‌ಎಸ್‌ಎಸ್ ಅದೇ ತಂತ್ರವನ್ನು ಹೆಣೆದಿತ್ತು: ರಾಹುಲ್ ಗಾಂಧೀಜಿ

ಬೀದಿ ನಾಯಿ ಪ್ರಕರಣದಲ್ಲಿ ಸುಪ್ರೀಂ ತೀರ್ಪುನ ಬಳಿಕ ಕ್ರಮಕ್ಕೆ ಮುಂದಾದ ಸರ್ಕಾರ

ಕಲಾಸಿಪಾಳ್ಯ: ಕೇಸರಿ ಶಾಲು ಧರಿಸಿದ್ದಕ್ಕೆ ಹಿಗ್ಗಾಮುಗ್ಗಾ ಥಳಿತ, ತನಿಖೆಯಲ್ಲಿ ಭಾರೀ ಬೆಳವಣಿಗೆ

ಮುಂದಿನ ಸುದ್ದಿ
Show comments