Publish Date: Sat, 23 May 2026 (16:27 IST)
Updated Date: Sat, 23 May 2026 (16:31 IST)
ದೇವಾಲಯವೊಂದರಲ್ಲಿ ಅನ್ನ ಬಡಿಸುವಾಗ ವಿಡಿಯೋ ಮಾಡಿಕೊಂಡು ತಟ್ಟೆಗೆ ಅನ್ನ ಎಸೆಯುತ್ತಾರೆ ಎಂದು ಆರೋಪಿಸಿದ ವ್ಯಕ್ತಿಯನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ದಕ್ಷಿಣ ಕನ್ನಡದ ಬಹುತೇಕ ದೇವಾಲಯಗಳಲ್ಲಿ ಅನ್ನಪ್ರಸಾದವಿರುತ್ತದೆ. ಎಷ್ಟೇ ಜನ ಭಕ್ತರು ಬಂದರೂ ಅವರನ್ನು ಹಸಿವಿನಿಂದ ಮರಳುವಂತೆ ಮಾಡುವುದಿಲ್ಲ. ಎಲ್ಲರಿಗೂ ಸುಗ್ರಾಸ ಭೋಜನವನ್ನು ನೀಡಿ ಕಳುಹಿಸುತ್ತಾರೆ.
ಆದರೆ ಇಲ್ಲೊಬ್ಬ ವ್ಯಕ್ತಿ ದೇವಾಲಯಕ್ಕೆ ಹೋದಾಗ ಅನ್ನ ಬಡಿಸುವ ವಿಡಿಯೋ ಮಾಡಿಕೊಂಡಿದ್ದಾನೆ. ಸಾಕಷ್ಟು ಜನ ಸಾಲಾಗಿ ಕುಳಿತಿರುವುದರಿಂದ ಅವರೆಲ್ಲರಿಗೂ ಅನ್ನ ಪ್ರಸಾದ ವಿತರಿಸಲು ಕೈ ಗಾಡಿಯಲ್ಲಿ ಅನ್ನವನ್ನು ಇಬ್ಬರು ತಳ್ಳಿಕೊಂಡು ಬಡಿಸುತ್ತಾರೆ.
ಈ ವೇಳೆ ಕೆಲವರು ತಟ್ಟೆಯನ್ನು ಮೇಲೆ ಎತ್ತಿ ಹಿಡಿಯುತ್ತಾರೆ. ಹೀಗಾಗಿ ಅವರಿಗೆ ಸರಿಯಾಗಿ ಅನ್ನ ಬಡಿಸಲಾಗುತ್ತದೆ. ಆದರೆ ತಟ್ಟೆ ಎತ್ತದೇ ನೆಲದ ಮೇಲೆಯೇ ಇಟ್ಟುಕೊಂಡವರಿಗೆ ಬಡಿಸುವಾಗ ಅನ್ನ ಚೆಲ್ಲುತ್ತದೆ. ಇದನ್ನು ಭಕ್ತರೊಬ್ಬರು ವಿಡಿಯೋ ಮಾಡಿಕೊಳ್ಳುತ್ತಾರೆ. ಇದನ್ನು ಗಮನಿಸುವ ಅನ್ನ ಬಡಿಸುವ ದೇವಾಲಯದ ಸಿಬ್ಬಂದಿ ವಿಡಿಯೋ ಮಾಡದಂತೆ ಸೂಚಿಸುತ್ತಾರೆ. ಆಗ ಆತ ನೀವು ಹೇಗೆ ಬಡಿಸ್ತೀರಿ ಎಂದು ಗೊತ್ತಾಗಬೇಕಲ್ವಾ ಎನ್ನುತ್ತಾನೆ. ಈ ಮೂಲಕ ದೇವಾಲಯಗಳಲ್ಲಿ ಅನ್ನ ಸರಿಯಾಗಿ ಬಡಿಸುತ್ತಿಲ್ಲ ಎಂದು ತೋರಿಸಲು ಹೊರಡುತ್ತಾನೆ.
ಆದರೆ ಆತನ ವಿಡಿಯೋ ನೋಡಿದ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಅಷ್ಟು ದೊಡ್ಡ ತಳ್ಳು ಗಾಡಿಯಲ್ಲಿ ಬಡಿಸುವಾಗ ನೀವೇ ತಟ್ಟೆ ಎತ್ತಿ ಹಿಡಿಯಬೇಕಿತ್ತು. ಅದು ಬಿಟ್ಟು ಬೇಕೆಂದೇ ವಿವಾದ ಮಾಡಲೆಂದೇ ಬಟ್ಟಲನ್ನು ಎತ್ತದೇ ವಿಡಿಯೋ ಮಾಡಿರುವ ಉದ್ದೇಶವೇನು? ಎಲ್ಲದರಲ್ಲೂ ತಪ್ಪು ಹುಡುಕಬೇಡಿ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವಿಡಿಯೋ ನೋಡಿ ತಪ್ಪು ಯಾರದ್ದೆಂದು ನೀವೇ ಹೇಳಿ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ