Select Your Language

Notifications

webdunia
webdunia
webdunia
webdunia

ಎಕ್ಸಾಂ ಬರೆಯಲು ಬಳಸಿದ್ದ ಡಿವೈಸ್ ಪತ್ತೆ

ಎಕ್ಸಾಂ ಬರೆಯಲು ಬಳಸಿದ್ದ ಡಿವೈಸ್ ಪತ್ತೆ
bangalore , ಗುರುವಾರ, 28 ಏಪ್ರಿಲ್ 2022 (16:51 IST)
545 ಪಿಎಸ್ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ PSI ಪರೀಕ್ಷಾ ಅಕ್ರಮಕ್ಕೆ ಬಳಸಿದ್ದ ಎಲೆಕ್ಟ್ರಾನಿಕ್ ಡಿವೈಸ್​​​​ಗಳು ಪತ್ತೆಯಾಗಿವೆ. ರುದ್ರಗೌಡ ಪಾಟೀಲ್, ಮಹಾಂತೇಶ್ ಪಾಟೀಲ್ ಮನೆಯಲ್ಲಿ ಎಲೆಕ್ಟ್ರಾನಿಕ್ ಡಿವೈಸ್ ಪತ್ತೆಯಾಗಿದ್ದು, ಈ ಬಗ್ಗೆ ಸಿಐಡಿ ಇನ್ನೂ ದೃಢಪಡಿಸಿಲ್ಲ.. ಸಿಐಡಿ ಪೊಲೀಸರು ಇದು ಮಾದರಿ ಡಿವೈಸ್ ಎಂದು ತೋರಿಸ್ತಿದ್ದಾರೆ.. ಈಗಾಗಲೇ ರುದ್ರಗೌಡ, ಮಹಾಂತೇಶ್​​ನನ್ನು ಸಿಐಡಿ ಬಂಧಿಸಿದೆ..ರುದ್ರಗೌಡ PSI ಪರೀಕ್ಷೆ ಅಕ್ರಮದ ಕಿಂಗ್​​​ಪಿನ್ ಆಗಿದ್ದಾರೆ. ಅಕ್ರಮವಾಗಿ ಪರೀಕ್ಷೆ ಬರೆದಿದ್ದವರನ್ನೂ ಪೊಲೀಸರು ಬಂಧಿಸಿದ್ದಾರೆ. ಪರೀಕ್ಷಾ ಅಕ್ರಮಕ್ಕೆ ಆರ್ಡರ್​​ ಕೊಟ್ಟು ಡಿವೈಸ್ ಸಿದ್ಧಪಡಿಸುತ್ತಿದ್ದರು.. ಸಿಮ್ ಅಳವಡಿಸಿ ಕೀಪ್ಯಾಡ್ ಮೊಬೈಲ್ ಮಾದರಿಯ ಪುಟ್ಟ ಕಿವಿಯಲ್ಲಿ ಇರಿಸಿಕೊಳ್ಳಲು ಬ್ಲೂಟೂತ್ ಡಿವೈಸ್ ಸಿದ್ಧಪಡಿಸುತ್ತಿದ್ದರು..ಯಾರಿಗೂ ಗೊತ್ತಾಗದಂತೆ ಪರೀಕ್ಷಾ ಅಕ್ರಮವೆಸಗುತ್ತಿದ್ದ ಅಭ್ಯರ್ಥಿಗಳು, ಪರೀಕ್ಷೆ ಮುಗಿದ ನಂತರ ಎಲೆಕ್ಟ್ರಾನಿಕ್ ಡಿವೈಸ್ ವಾಪಸ್ ನೀಡುತ್ತಿದ್ದರು..ಅಭ್ಯರ್ಥಿಗಳು ಪರೀಕ್ಷೆಯ ನಂತರ ಕಿಂಗ್​​​ಪಿನ್​​​ಗಳಿಗೆ ಎಲೆಕ್ಟ್ರಾನಿಕ್ ಡಿವೈಸ್ ಹಿಂದಿರುಗಿಸುತ್ತಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

‘ರಾಜ್ಯದ ಸ್ಥಿತಿಗತಿ ಬಗ್ಗೆ ವಿವರಣೆ’