Publish Date: Thu, 30 Nov 2023 (16:21 IST)
Updated Date: Thu, 30 Nov 2023 (17:36 IST)
ಭ್ರೂಣ ಹತ್ಯೆ ಪತ್ತೆ ಮಾಡುವುದು ತುಂಬಾ ಕ್ರೂರವಾದುದು ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಹೇಳಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು, ಇವತ್ತಿನ ಕಾಲದಲ್ಲೂ ಹೆಣ್ಣು, ಗಂಡು ಎಂಬ ತಾರತಮ್ಯ ಭ್ರೂಣ ಪತ್ತೆ ಮಾಡುವ ಕಾರ್ಯದಲ್ಲಿದ್ದೇವೆ ಎಂದರೆ, ನಾವು ನಾಚಿಕೆ ಪಡುವಂತ ಸಂಗತಿ. ದುಡ್ಡಿಗಾಗಿ ಈ ರೀತಿ ಕೃತ್ಯ ಮಾಡಬಾರದು. ನಾವು ಎಲ್ಲರೂ ವಿದ್ಯಾವಂತರು ಅರ್ಥಮಾಡಿಕೊಳ್ಳುತ್ತಿಲ್ಲ. ಹೆಣ್ಣು ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದೆ.
ಪೊಲೀಸರು ಅಲರ್ಟ್ ಆಗಿ ಇಂತಹ ಕೃತ್ಯ ತಡೆಯಬೇಕು. ಇದು ನಿಗೂಢ ಜಾಗ. ಇಲ್ಲಿ ಭ್ರೂಣ ಪತ್ತೆ ಹಚ್ಚುವ ಕೆಲಸ ಮಾಡ್ತಿದ್ದಾರೆ ಅನ್ನೋ ಮಾಹಿತಿ ಇದೆ. ತಪ್ಪಿತಸ್ಥರ ವಿರುದ್ದ ಕ್ರಮವಾಗಬೇಕು. ಸಂಪೂರ್ಣ ತನಿಖೆಯಾಗಬೇಕು. ಇದರ ಹಿಂದೆ ದೊಡ್ಡ ಜಾಲ ಇದೆ ಪತ್ತೆ ಹಚ್ಚಬೇಕು. ಹೆಣ್ಣು ಮಕ್ಕಳ ಹತ್ಯೆ ಮಾಡುವುದು ಘೋರ ಅಪರಾಧ. ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮವಾಗಬೇಕು ಎಂದ್ರು.